ಸಿರಿಂಜ್ ವಿವಾದ: ಭಾರತದ ವೈದ್ಯ ಅಮೋಲ್‌ಗೆ ಛೀಮಾರಿ

Update: 2018-04-03 18:49 GMT

ಗೋಲ್ಡ್‌ಕೋಸ್ಟ್, ಎ.3: ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಗ್ರಾಮದಲ್ಲಿ ಸಿರಿಂಜ್‌ಗಳನ್ನು ಬಳಸಿದ ಕಾರಣಕ್ಕೆ ಭಾರತದ ಬಾಕ್ಸರ್‌ಗಳು ಶಿಕ್ಷೆಯಿಂದ ಪಾರಾಗಿ ನಿಟ್ಟುಸಿರುಬಿಟ್ಟಿದ್ದಾರೆ. ನಿಯಮದ ಪ್ರಕಾರ ಸೂಜಿಗಳನ್ನು ಕೊಠಡಿಯಿಂದ ವಿಲೇವಾರಿ ಮಾಡದೇ ನಿರ್ಲಕ್ಷವಹಿಸಿದ ಭಾರತದ ಬಾಕ್ಸರ್‌ಗಳ ವೈದ್ಯರಾದ ಅಮೋಲ್ ಪಾಟೀಲ್‌ಗೆ ಛೀಮಾರಿ ಹಾಕಲಾಗಿದೆ.

ಕಾಮನ್‌ವೆಲ್ತ್ ಗೇಮ್ಸ್ ನಿಯಮದ ಪ್ರಕಾರ ಯಾವ ಅಥ್ಲೀಟ್‌ಗಳು ಸೂಜಿಗಳನ್ನು ಬಳಸುವಂತಿಲ್ಲ. ಗೇಮ್ಸ್‌ನಲ್ಲಿ ‘ನೋ ನೀಡಲ್ ಪಾಲಿಸಿ’ ಜಾರಿಗೆ ತರಲಾಗಿದೆ. ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ಸ್ ಮೆಡಿಕಲ್ ಕಮಿಶನ್ ಸಲ್ಲಿಸಿದ ದೂರನ್ನು ವಿಚಾರಣೆ ನಡೆಸಿದ ಸಿಜಿಎಫ್ ಕೋರ್ಟ್, ಸಿರಿಂಜ್‌ಗಳನ್ನು ಬಿಸಾಡದೇ ನಿರ್ಲಕ್ಷವಹಿಸಿದ ವೈದ್ಯ ಪಾಟೀಲ್‌ಗೆ ಛೀಮಾರಿ ಹಾಕಿತು.

ಅನಾರೋಗ್ಯಕ್ಕೀಡಾದ ಅಥ್ಲೀಟ್‌ಗಳಿಗೆ ಪಾಟೀಲ್ ‘ಬಿ’ ವಿಟಮಿನ್ ಕಾಂಪ್ಲೆಕ್ಸ್ ಇಂಜೆಕ್ಷನ್ ನೀಡಿದ್ದರು.

ನೋ ನೀಡಲ್ ಪಾಲಿಸಿ ಪ್ರಕಾರ ಸೂಜಿಗಳನ್ನು ಸಿಎಜಿ ನಿಯೋಗದ ಅಧಿಕೃತ ವೈದ್ಯಕೀಯ ಸಿಬ್ಬಂದಿಗಳಿಗೆ ನಿಷೇಧವಿರುವ ಕೇಂದ್ರ ಸುರಕ್ಷಾ ಸ್ಥಳದಲ್ಲಿ ಸಂಗ್ರಹಿಸಿಡಬೇಕು. ಪಾಲಿಕ್ಲಿನಿಕ್‌ಗೆ ಎರಡು ಬಾರಿ ಭೇಟಿ ನೀಡುವ ತನಕ ಸೂಜಿಗಳನ್ನು ವಿಲೇವಾರಿ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಸಿಜಿಎಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News