ಚೀನಾದಿಂದ 2 ಪಾಕ್ ಉಪಗ್ರಹಗಳ ಉಡಾವಣೆ

Update: 2018-04-04 16:00 GMT

ಬೀಜಿಂಗ್, ಎ. 4: ಚೀನಾವು ಪಾಕಿಸ್ತಾನಕ್ಕಾಗಿ ಜೂನ್‌ನಲ್ಲಿ ಎರಡು ದೂರ ಸಂವೇದಿ ಉಪಗ್ರಹಗಳನ್ನು ಉಡಾಯಿಸಲಿದೆ ಎಂದು ಚೀನಾ ಉಪಗ್ರಹ ಉಡಾವಣಾ ತಂತ್ರಜ್ಞಾನ ಅಕಾಡಮಿ ಮಂಗಳವಾರ ತಿಳಿಸಿದೆ.

‘ಲಾಂಗ್ ಮಾರ್ಚ್-2ಸಿ’ ರಾಕೆಟ್ ಈ ಉಪಗ್ರಹಗಳನ್ನು ಭೂಮಿಯ ಕಕ್ಷೆಯಲ್ಲಿ ಇರಿಸಲಿದೆ. ಈ ರಾಕೆಟ್ ಈ ಮೊದಲು, 1999ರಲ್ಲಿ ಮೋಟೊರೊಲದ ಇರೀಡಿಯಂ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಒಯ್ದಿತ್ತು.

ಚೀನಾವು 2011ರಲ್ಲಿ ಪಾಕಿಸ್ತಾನದ ಸಂಪರ್ಕ ಉಪಗ್ರಹ ‘ಪಾಕ್‌ಸ್ಯಾಟ್-1ಆರ್’ನ್ನು ಉಡಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News