ಆನೇಕಲ್: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 7 ಲಕ್ಷ ನಗದು ವಶ

Update: 2018-04-04 16:42 GMT

ಆನೇಕಲ್,ಎ.04: ದಾಖಲೆಗಳಿಲ್ಲದೆ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬಂಧಿಸಿದ ಪೊಲೀಸರು ಆತನಿಂದ 7 ಲಕ್ಷ ನಗದು ವಶಪಡಿಸಿಕೊಂಡ ಘಟನೆ ಆನೇಕಲ್- ಹೊಸೂರು ರಸ್ತೆ ಸಮಂದೂರು ಗೇಟ್ ಬಳಿ ನಡೆದಿದೆ.

ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ತಮಿಳುನಾಡು ಗಡಿ ಭಾಗದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಬೆಂಗಳೂರು-ಆನೇಕಲ್ ನಿಂದ ಕೆಂಪಟ್ಟಿಗೆ ತೆರಳುತ್ತಿದ್ದ ಕಾರನ್ನು ತಪಾಸಣೆಗೊಳಪಡಿಸಿದಾಗ ಈ ಹಣ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News