ಅಬ್ಬಾಸ್ ಹಾಜಿ

Update: 2018-04-06 15:08 GMT

ಕಾಪು, ಎ.6: ಉಡುಪಿಯ ಉದ್ಯಮಿ, ಕಾಪು ಪೊಲಿಪು ನಿವಾಸಿ ಅಬ್ಬಾಸ್ ಹಾಜಿ(68) ಅಲ್ಪಕಾಲ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಸುಕಿನ ವೇಳೆ ನಿಧನರಾದರು.

ಇವರು ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರು, ಸಹೋದರರಾದ ಉಡುಪಿಯ ಉದ್ಯಮಿ ಅಜಬ್ಬ ಕಾಪು ಹಾಗೂ ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಗುಡ್‌ವಿಲ್ ಮುಹಿಯ್ಯುದ್ದೀನ್ ಹಾಜಿ ಅವರನ್ನು ಅಗಲಿದ್ದಾರೆ.

ಅಸಯ್ಯದ್ ಜಲಾಲುದ್ದೀನ್ ಮದನಿ ಮಲ್ಜೈ ತಂಙಳ್, ಕಾಪು ಶಾಸಕ ವಿನಯಕುಮಾರ್ ಸೊರಕೆ, ಬಿಜೆಪಿ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮೃತರ ಮನೆಗೆ ಆಗಮಿಸಿ ಸಂತಾಪ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ