ನೆಹರೂ ಹುಟ್ಟುಹಬ್ಬದಂದು ಮಕ್ಕಳ ದಿನಾಚರಣೆಗೆ ಕೊಕ್ ?

Update: 2018-04-07 03:19 GMT

ಹೊಸದಿಲ್ಲಿ, ಎ. 7: ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಹುಟ್ಟುಹಬ್ಬವಾದ ನವೆಂಬರ್ 14ರ ಬದಲಾಗಿ ಡಿಸೆಂಬರ್ 26ರಂದು ಮಕ್ಕಳ ದಿನಾಚರಣೆ ನಿಗದಿಪಡಿಸುವಂತೆ ಬಿಜೆಪಿಯ 60 ಮಂದಿ ಸಂಸದರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿದ್ದಾರೆ.

ದೆಹಲಿ ಪಶ್ಚಿಮ ಕ್ಷೇತ್ರದ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಈ ಬಗ್ಗೆ ಪತ್ರ ಬರೆದಿದ್ದು, ಇತರ 59 ಸಂಸದರು ಇದಕ್ಕೆ ಸಹಿ ಮಾಡಿದ್ದಾರೆ.

ಗುರುಗೋವಿಂದ್ ಸಿಂಗ್ ಅವರ ಮಕ್ಕಳು ಹುತಾತ್ಮರಾದ ದಿನವಾದ ಡಿಸೆಂಬರ್ 26ರಂದು ಮಕ್ಕಳ ದಿನಾಚರಣೆ ನಿಗದಿಪಡಿಸುವಂತೆ ಆಗ್ರಹಿಸಿದ್ದಾರೆ. ನೆಹರೂ ಸ್ಮರಣೆಗಾಗಿ ನವೆಂಬರ್ 14ನ್ನು ಚಾಚಾ ದಿವಸ್ ಆಗಿ ಆಚರಿಸಬಹುದು ಎಂದು ಅವರು ಸಲಹೆ ಮಾಡಿದ್ದಾರೆ. ಗುರುಗೋವಿಂದ್ ಸಿಂಗ್ ಅವರ ನಾಲ್ವರು ಮಕ್ಕಳಾದ ಸಾಹೀಬ್‌ಝಾದಾ ಅಜಿತ್ ಸಿಂಗ್ (18), ಸಾಹೀಬ್‌ಝಾದಾ ಜುಹಾರ್ ಸಿಂಗ್ (14), ಸಾಹೀಬ್‌ಝಾದಾ ಝೋರಾವರ್ ಸಿಂಗ್ (9) ಮತ್ತು ಸಾಹೀಬ್‌ಝಾದಾ ಫತೇಹ್‌ಸಿಂಗ್ (7) ಅವರು ಔರಂಗಝೇಬ್ ನ ಆಡಳಿತಾವಧಿಯಲ್ಲಿ ಹುತಾತ್ಮರಾಗಿದ್ದರು. ನವೆಂಬರ್ 14ನ್ನು ಅಂಕಲ್ ಡೇ ಅಥವಾ ಚಾಚಾ ದಿವಸ್ ಆಗಿ ಆಚರಿಸಬಹುದು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ಬಗ್ಗೆ ಕಾಂಗ್ರೆಸ್ ಮುಖಂಡರ ಜತೆ ಚರ್ಚಿಸುವುದಾಗಿಯೂ ವರ್ಮಾ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News