ಲೋಕಸಭಾ ಚುನಾವಣೆ: ದೇಶದಾದ್ಯಂತ 3ನೇ ಹಂತದ ಮತದಾನ ಆರಂಭ

Update: 2024-05-07 03:23 GMT

ಬೆಂಗಳೂರು: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮಂಗಳವಾರ ಆರಂಭವಾಗಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ 2 ನೇ ಹಂತದ ಮತದಾನ ನಡೆಯುತ್ತಿದೆ.

ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.120 ಮಹಿಳೆಯರ ಸಹಿತ 1,300ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಿಜೆಪಿ ಈಗಾಗಲೇ ಸೂರತ್ ಕ್ಷೇತ್ರವನ್ನು ಅವಿರೋಧವಾಗಿ ಗೆದ್ದಿದೆ. ಏಪ್ರಿಲ್ 19 ಮತ್ತು 26ರಲ್ಲಿ ಎರಡು ಹಂತಗಳ ಮತದಾನ ಪೂರ್ಣಗೊಂಡ ಬಳಿಕ 18ನೇ ಲೋಕಸಭೆಯ ಮೂರನೇ ಹಂತದ ಮತದಾನ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಗಾಂಧಿನಗರ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಅಹಮದಾಬಾದ್ ನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ.

ಮೂರನೇ ಹಂತದಲ್ಲಿ ಗೋವಾದ 2, ಗುಜರಾತ್ ನ 25, ಛತ್ತೀಸ್ ಗಢದ 7, ಕರ್ನಾಟಕದ 14 ಕ್ಷೇತ್ರಗಳು ಸೇರಿವೆ. ಈ ರಾಜ್ಯಗಳಲ್ಲಿ ಚುನಾವಣೆ ಇಂದು ಮುಕ್ತಾಯವಾಗಲಿದೆ. ಕರ್ನಾಟಕದಲ್ಲಿ 14 ಕ್ಷೇತ್ರಗಳ ಚುನಾವಣೆ ಏಪ್ರಿಲ್ 26ರಂದು ಮುಕ್ತಾಯವಾಗಿತ್ತು. ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಕ್ಷೇತ್ರಗಳ ಮತದಾನ ಕೂಡಾ ನಡೆಯುತ್ತಿದೆ.

ಗೃಹಸಚಿವ ಅಮಿತ್ ಶಾ (ಗುಜರಾತ್ ನ ಗಾಂಧಿನಗರ), ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ (ರಾಜಗಢ), ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ (ವಿದಿಶಾ), ಸಮಾಜವಾದಿ ಪಕ್ಷದ ಡಿಂಪಲ್ ಯಾದವ್, (ಮೈನಪುರಿ), ಎನ್ ಸಿಪಿಯ ಸುಪ್ರಿಯಾ ಸುಳೆ (ಬಾರಾಮತಿ), ಬಿಜೆಪಿಯ ಪುರುಷೋತ್ತಮ ರುಪಾಲಾ (ರಾಜಕೋಟ್), ಜ್ಯೋತಿರಾದಿತ್ಯ ಸಿಂಧ್ಯಾ (ಗುಣಾ), ಪ್ರಹ್ಲಾದ್ ಜೋಶಿ (ಧಾರವಾಡ) ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಶಿಕಾರಿಪುರ ದ ಬೂತ್ ನಂಬರ್ 137 ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ರಾಘವೇಂದ್ರ ಅವರು ಮತ ಚಲಾಯಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಅವರು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿರುವ ಮತಗಟ್ಟಗೆ ಆಗಮಿಸಿ ಮತದಾನ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News