ನನ್ನನ್ನು ಸರ್ ಅಂತ ಕರೆಯಬೇಡಿ ಎಂದ ರಾಹುಲ್ ಗಾಂಧಿ

Update: 2018-04-08 10:22 GMT

ಬೆಂಗಳೂರು ,ಎ.8: ಜ್ಞಾನಜ್ಯೋತಿ ಸಭಾಂಗಣದಲ್ಲಿ ರವಿವಾರ ನಡೆದ  ಉದ್ಯಮಿಗಳ ಜೊತೆ ನಡೆದ ಸಂವಾದದಲ್ಲಿ ಕಾರ್ಯಕ್ರಮದಲ್ಲಿ ಉದ್ಯಮಿಯೊಬ್ಬರು  ‘ಸರ್’ ಎಂದು ರಾಹುಲ್ ಗಾಂಧಿ ಅವರ ಗಮನ ಸೆಳೆದಾಗ ರಾಹುಲ್  ನನ್ನನ್ನು ಸರ್ ಎಂದು ಕರೆಯಬೇಡಿ. ರಾಹುಲ್ ಅಂತ ಕರೆಯಿರಿ ಎಂದರು.

ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಜಿಎಸ್ ಟಿ ಜಗತ್ತಿನಲ್ಲೇ ಅತ್ಯಂತ ಕ್ಲಿಷ್ಟಕರ ವ್ಯವಸ್ಥೆ. ಸುಡಾನ್ ಮತ್ತು ಪಾಕಿಸ್ತಾನದಲ್ಲಿ ಮಾತ್ರ ಇಂತಹ ತೆರಿಗೆ ವಿಧಾನ ಜಾರಿಯಲ್ಲಿದೆ ಎಂದರು.

ಕೇಂದ್ರದ ಬುಲೆಟ್ ರೈಲು ಯೋಜನೆ ವಿಫಲವಾಗಿದೆ, ಈ ಯೋಜನೆಗೆ ಅನಗತ್ಯವಾಗಿ ಹಣ ಸುರಿಯಲಾಗಿದೆ. ಈ ಯೋಜನೆಗೆ ಬಳಸುವ ಹಣವನ್ನು ದೇಶದ ರೈಲು ವ್ಯವಸ್ಥೆಯ ಸುಧಾರಣೆಗೆ ಬಳಸಬಹುದಿತ್ತು ಎಂದರು.

ರಾಹುಲ್ ಗಾಂಧಿ ಅವರು ಜಕ್ಕರಾಯನಕೆರೆಯ ಬಳಿ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು ಮತ್ತು ಮಹಿಳಾ ಸಾಧಕಿಯರ  ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಿ.ಬಿ.ಎಂ.ಪಿಯಪೌರಕಾರ್ಮಿಕರಾಗಿರುವ  ಶ್ರೀನಿವಾಸರವರ ಮನೆಗೆ ಭೇಟಿ ನೀಡಿ ಅವರ ಕುಟುಂಬದೊಂದಿಗೆ ಉಪಹಾರ ಸೇವಿಸಿದರು.

ರಾಜಸ್ಥಾನದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವರ  ಮನೆಗೆ ರಾಹುಲ್ ಗಾಂಧಿ ಭೇಟಿ ನೀಡಿದರು. ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ  ಹೇಳಿದರು. ಮಾರ್ಗರೇಟ್ ಆಳ್ವರ ಪತಿ ನಿರಂಜನ್ ಆಳ್ವರ ಅಗಲಿಕೆಗೆ ಸಂತಾಪ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News