ಗ್ರಂಥಾಲಯ ಇಲಾಖೆ ಆದೇಶ : ಕನ್ನಡ-ಇಂಗ್ಲಿಷ್ ಪುಸ್ತಕ ಖರೀದಿಯಲ್ಲಿ ಏಕರೂಪ ಬೆಲೆ

Update: 2018-04-08 18:41 GMT

ಬೆಂಗಳೂರು, ಎ.8: ಕನ್ನಡ ಪುಸ್ತಕ ಪ್ರಕಾಶಕರ ಹೋರಾಟದ ಫಲವಾಗಿ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಬೆಲೆಯನ್ನು ಏಕರೂಪಗೊಳಿಸಿ ಗ್ರಂಥಾಲಯ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಕನ್ನಡ ಪುಸ್ತಕಗಳಿಗೆ ಕಡಿಮೆ ಮತ್ತು ಇಂಗ್ಲಿಷ್ ಪುಸ್ತಕಗಳಿಗೆ ಹೆಚ್ಚು ದರ ನಿಗದಿ ಪಡಿಸಲಾಗಿತ್ತು. ಈ ತಾರತಮ್ಯ ನೀತಿಯನ್ನು ಬದಲಾಯಿಸಬೇಕು ಎಂದು ಕನ್ನಡ ಪುಸ್ತಕಗಳ ಪ್ರಕಾಶಕರ ಸಂಘಟನೆಗಳು ಹೋರಾಟ ನಡೆಸಿದ್ದವು. ಇದಕ್ಕೆ ಮಣಿದಿರುವ ಗ್ರಂಥಾಲಯ ಇಲಾಖೆ ತಾರತಮ್ಯವನ್ನು ನಿವಾರಿಸಿ ಕನ್ನಡ ಪುಸ್ತಕಗಳಿಗೆ ನಿಗದಿ ಮಾಡಿರುವ ದರವನ್ನೆ ಇಂಗ್ಲಿಷ್ ಮತ್ತು ಇತರೆ ಭಾರತೀಯ ಭಾಷೆಗಳಿಗೂ ಅನ್ವಯಗೊಳಿಸಿದೆ.

ಇಂಗ್ಲಿಷ್ ಮತ್ತು ಇತರೆ ಭಾಷೆಯ ಪುಸ್ತಕಗಳಿಗೆ ರಬ್ಬರ್ ಸ್ಟಾಂಪ್ ಮೂಲಕ ಮನಸೋ ಇಚ್ಚೆ ಬೆಲೆಯನ್ನು ಮುದ್ರಿಸಿ ಗ್ರಂಥಾಲಯಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಪುಸ್ತಕ ಪ್ರಕಾಶಕರ ಒಕ್ಕೂಟ ಆರೋಪಿಸಿ ಪ್ರತಿಭಟನೆ ನಡೆಸಿತ್ತು. ಗ್ರಂಥಾಲಯ ಇಲಾಖೆ ನಮ್ಮ ಮನವಿಗೆ ಸ್ಪಂದಿಸಿ ಎಲ್ಲ ಭಾಷೆಯ ಪುಸ್ತಕಗಳಿಗೂ ಏಕರೂಪ ಬೆಲೆಯನ್ನು ನಿಗದಿ ಪಡಿಸಿದೆ ಎಂದು ಸಂಘದ ಕಾರ್ಯದರ್ಶಿ ಸೃಷ್ಠಿ ನಾಗೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News