ಐಪಿಎಲ್‌ನಿಂದ ಕಮ್ಮಿನ್ಸ್ ಔಟ್

Update: 2018-04-10 18:42 GMT

ಹೊಸದಿಲ್ಲಿ, ಎ.10: ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಬೆನ್ನುನೋವಿನಿಂದಾಗಿ ಈ ವರ್ಷದ ಐಪಿಎಲ್‌ನಿಂದ ಹೊರಗುಳಿದಿದ್ದಾರೆ.

ಕಮ್ಮಿನ್ಸ್‌ರನ್ನು ಮುಂಬೈ ಇಂಡಿಯನ್ಸ್ ತಂಡ 5.4 ಕೋ.ರೂ. ನೀಡಿ ಖರೀದಿಸಿತ್ತು. 24ರ ಹರೆಯದ ಕಮ್ಮಿನ್ಸ್ ಈ ವರ್ಷದ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ತಂಡದ ಪರ ಆಡಿರಲಿಲ್ಲ. ಈ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ 1 ವಿಕೆಟ್‌ನಿಂದ ಗೆದ್ದುಕೊಂಡಿತ್ತು.

ಮಿಚೆಲ್ ಸ್ಟಾರ್ಕ್‌ರಂತೆಯೇ ಕಮ್ಮಿನ್ಸ್ ಈ ವರ್ಷದ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ. ದಕ್ಷಿಣ ಆಫ್ರಿಕ ವಿರುದ್ಧದ 4ನೇ ಟೆಸ್ಟ್ ಪಂದ್ಯದ ವೇಳೆ ಕಮ್ಮಿನ್ಸ್‌ಗೆ ಬೆನ್ನುನೋವು ಹಾಕಿಕೊಂಡಿತ್ತು. ಸ್ಕಾನಿಂಗ್ ಬಳಿಕ ಅವರ ಗಾಯದ ಗಂಭೀರತೆ ಬೆಳಕಿಗೆ ಬಂದಿದೆ. ಗಾಯ ಗಂಭೀರ ಸ್ವರೂಪ ಪಡೆಯುವುದನ್ನು ತಪ್ಪಿಸಲು ಅವರಿಗೆ ಬೌಲಿಂಗ್ ಮಾಡದಂತೆ ವೈದ್ಯರು ಸೂಚಿಸಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News