ಯು.ರತ್ನಾ ಪೈ

Update: 2018-04-13 14:47 GMT

ಕಾರ್ಕಳ, ಎ.13:ಕಾರ್ಕಳದ ಜಯಭಾರತಿ ಸಮೂಹ ಸಂಸ್ಥೆಗಳ ಮಾಲಕರಾದ ಮೂರೂರು ಮನೆತನದ ದಿ ಉಪೇಂದ್ರ ಪೈ ಅವರ ಧರ್ಮಪತ್ನಿ ಯು. ರತ್ನಾ ಪೈ (82) ಇವರು ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು 15 ವರ್ಷಗಳ ಕಾಲ ಜನಸಂಘ, ಜನತಾಪಾರ್ಟಿ ಮತ್ತು ಭಾರತೀಯ ಜನತಾ ಪಾರ್ಟಿಯಿಂದ ಕಾರ್ಕಳ ಟೌನ್ ಮುನ್ಸಿಪಾಲಿಟಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರಲ್ಲದೇ ಜಿಎಸ್‌ಬಿ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಮೂವರು ಪುತ್ರರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ