ಮೈಸೂರು: ಅಪರಿಚಿತ ವಾಹನ ಢಿಕ್ಕಿ; ವ್ಯಕ್ತಿ ಮೃತ್ಯು

Update: 2018-04-13 15:44 GMT

ಮೈಸೂರು,ಎ.13: ಅಪರಿಚಿತ ವ್ಯಕ್ತಿಗೆ ವಾಹನವೊಂದು ಢಿಕ್ಕಿಯಾದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು-ಬೆಂಗಳೂರು ರಸ್ತೆಯಲ್ಲಿ ನಡೆದಿದೆ.

ಮೈಸೂರು-ಬೆಂಗಳೂರು ರಸ್ತೆಯ ಸಂತ ಫಿಲೋಮಿನಾ ಕಾಲೇಜು ಫುಟ್ ಬಾಲ್ ಮೈದಾನದ ಬಳಿ ಎಲ್ ಐ ಸಿ ವೃತ್ತದ ಕಡೆಯಿಂದ ಜೆಎಸ್ ಎಸ್ ವೈದ್ಯಕೀಯ ಕಾಲೇಜು ಕಡೆ ತೆರಳುತ್ತಿದ್ದ ವಾಹನ ಅಪರಿಚಿತ ವ್ಯಕ್ತಿಯೋರ್ವರಿಗೆ ಬುಧವಾರ ಢಿಕ್ಕಿ ಹೊಡೆದಿದ್ದು, ತಲೆಯ ಮೇಲೆಯೇ ವಾಹನದ ಚಕ್ರ ಹರಿದಿದ್ದರಿಂದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News