7 ಭಾರತೀಯರಿಗೆ ಪ್ರತಿಷ್ಠಿತ ಗೇಟ್ಸ್ ಕೇಂಬ್ರಿಜ್ ಸ್ಕಾಲರ್‌ಶಿಪ್

Update: 2018-04-13 16:30 GMT

ಲಂಡನ್, ಎ. 13: ಪ್ರತಿಷ್ಠಿತ ಗೇಟ್ಸ್ ಕೇಂಬ್ರಿಜ್ ಸ್ಕಾಲರ್‌ಶಿಪ್‌ಗೆ 28 ದೇಶಗಳ 92 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಹಾಗೂ ಈ ಪೈಕಿ 7 ಮಂದಿ ಭಾರತೀಯರು.

ಈ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಬಹುದಾಗಿದೆ.

2018ರಲ್ಲಿ 49 ಮಹಿಳೆಯರು ಮತ್ತು 43 ಪುರುಷರು ಪಿಎಚ್‌ಡಿ ಮತ್ತು ಎಂಫಿಲ್ ಕೋರ್ಸ್‌ಗಳನ್ನು ಅಧ್ಯಯನ ಮಾಡಲಿದ್ದಾರೆ.

ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ವಿಶ್ವವಿದ್ಯಾನಿಲಯಕ್ಕೆ ನೀಡಿದ ದೇಣಿಗೆಯ ಹಣದಿಂದ ಈ ಸ್ಕಾಲರ್‌ಶಿಪ್ ಕಾರ್ಯಕ್ರಮವನ್ನು 2000 ಅಕ್ಟೋಬರ್‌ನಲ್ಲಿ ಆರಂಭಿಸಲಾಗಿತ್ತು. ಈ ಸ್ಕಾಲರ್‌ಶಿಪ್ ಪಡೆದ ಅಭ್ಯರ್ಥಿಗಳು ಕೇಂಬ್ರಿಜ್‌ನಲ್ಲಿ ಕಲಿಯುವ ಎಲ್ಲ ಖರ್ಚನ್ನು ಸ್ಕಾಲರ್‌ಶಿಪ್ ನೀಡುತ್ತದೆ. ಕಾಲೇಜು ಶುಲ್ಕ, ಜೀವನ ನಿರ್ವಹಣೆ, ಕುಟುಂಬ ಸದಸ್ಯರ ಪ್ರಯಾಣ ಮತ್ತು ಭತ್ತೆ, ಕ್ಷೇತ್ರ ಕಾರ್ಯ (ಫೀಲ್ಡ್ ವರ್ಕ್) ಮತ್ತು ವೀಸಾ ವೆಚ್ಚವೆಲ್ಲವೂ ಸ್ಕಾಲರ್‌ಶಿಪ್‌ನಲ್ಲಿ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News