ರಾಜ್ಯಸಭಾ ಸದಸ್ಯರಾಗಿ ಅರುಣ್ ಜೇಟ್ಲಿ ಪ್ರಮಾಣ ವಚನ ಸ್ವೀಕಾರ

Update: 2018-04-15 15:19 GMT

ಹೊಸದಿಲ್ಲಿ, ಎ.15: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಆರು ವರ್ಷಗಳ ಅವಧಿಗೆ ರಾಜ್ಯಸಭಾ ಸದಸ್ಯರಾಗಿ ರವಿವಾರ ಪ್ರಮಾಣ ವಚನ ಸ್ವೀಕರಿಸಿದರು. ಎಪ್ರಿಲ್ 3ರಂದು ಅವರು ತಮ್ಮ ಸ್ಥಾನಕ್ಕೆ ಉತ್ತರ ಪ್ರದೇಶದಿಂದ ಪುನರಾಯ್ಕೆಯಾಗಿದ್ದರು. ಅನಾರೋಗ್ಯದ ಕಾರಣದಿಂದ ಜೇಟ್ಲಿ ಇತ್ತೀಚೆಗೆ ಕೊನೆಗೊಂಡ ಸಂಸತ್ ಅಧಿವೇಶನದ ಸಮಯದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಅವರಿಗೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಮುಖ್ಯಸ್ಥ ವೆಂಕಯ್ಯ ನಾಯ್ಡು ಹೊಸದಿಲ್ಲಿಯ ಸಂಸತ್ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಮೇಲ್ಮನೆಯ ವಿರೋಧಪಕ್ಷದ ನಾಯಕ ಗುಲಾಮ್ ನಬಿ ಆಝಾದ್, ಬಿಜೆಪಿಯ ಅನಂತ ಕುಮಾರ್ ಹಾಗೂ ಇತರ ಹಿರಿಯ ನಾಯಕರು ಉಪಸ್ಥಿತರಿದ್ದರು. ಮೇಲ್ಮನೆಗೆ ಪುನರಾಯ್ಕೆಯಾದ ಕಾರಣದಿಂದ ಜೇಟ್ಲಿಯವರನ್ನು ರಾಜ್ಯಸಭಾ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಜೇಟ್ಲಿ ಇತ್ತೀಚೆಗೆ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅನಾರೋಗ್ಯದಿಂದ ಜೇಟ್ಲಿ ಈಗಲೂ ಪರಿಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹಾಗಾಗಿ ಅವರು ತಮ್ಮ ಕೆಲಸಕಾರ್ಯಗಳನ್ನು ತಮ್ಮ ನಿವಾಸದಿಂದಲೇ ನಿರ್ವಹಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News