ಮಧ್ಯಪ್ರದೇಶ: ಹಳಿತಪ್ಪಿದ ರೈಲು, ಕನಿಷ್ಠ 6 ಮಂದಿಗೆ ಗಾಯ

Update: 2018-04-15 15:54 GMT

ಜಬಲ್ಪುರ, ಎ. 15: ಕಟ್ನಿ-ಚೌಪಾನ್ ಪ್ಯಾಸೆಂಜರ್ ರೈಲಿನ 5 ಬೋಗಿಗಳು ಮಧ್ಯಪ್ರದೇಶದ ಸಲ್ನಾ ಹಾಗೂ ಪಿಪಾರಿಯಾ ಕಲನ್ ನಿಲ್ದಾಣದ ನಡುವೆ ಶನಿವಾರ ರಾತ್ರಿ ಹಳಿತಪ್ಪಿದ್ದು, ಕನಿಷ್ಠ 6 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕಟ್ನಿ ರೈಲ್ವೆ ನಿಲ್ದಾಣದ 30 ಕಿ.ಮೀ. ದೂರದಲ್ಲಿ ರಾತ್ರಿ 10 ಗಂಟೆಗೆ ರೈಲು ಹಳಿ ತಪ್ಪಿದೆ ಎಂದು ರೈಲ್ವೆ ರಕ್ಷಣಾ ಪಡೆಯ ಇನ್ಸ್‌ಪೆಕ್ಟರ್ ವಿರೇಂದ್ರ ಸಿಂಗ್ ಹೇಳಿದ್ದಾರೆ.

ರೈಲು ಹಳಿ ತಪ್ಪಿರುವುದನ್ನು ಪಶ್ಚಿಮ ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಗುಜನ್ ಗುಪ್ತಾ ದೃಢಪಡಿಸಿದ್ದಾರೆ. ಅಪಘಾತದಲ್ಲಿ 6 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಪರಿಹಾರ ಒದಗಿಸುವ ರೈಲು ಸ್ಥಳಕ್ಕೆ ತಲುಪಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News