ರಾಜ್ಯ ವಿಧಾನಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ 2ನೆ ಪಟ್ಟಿ ಬಿಡುಗಡೆ

Update: 2018-04-16 12:39 GMT

ಬೆಂಗಳೂರು, ಎ. 16: ಮೇ 12ರಂದು ಜರುಗಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ, 82 ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಪ್ರಕಟಿಸಿದ್ದು, ಘಟಾನುಘಟಿ ನಾಯಕರು ಪಕ್ಷದ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ಕ್ಷೇತ್ರದಿಂದ ಹರತಾಳು ಹಾಲಪ್ಪ, ಸೊರಬ-ಕುಮಾರ್ ಬಂಗಾರಪ್ಪ, ತೀರ್ಥಹಳ್ಳಿ-ಅರಗ ಜ್ಞಾನೇಂದ್ರ, ಹೊನ್ನಾಳಿ-ಎಂ.ಪಿ.ರೇಣುಕಾಚಾರ್ಯ, ಶಾಂತಿನಗರ-ವಾಸುದೇವ ಮೂರ್ತಿ, ಬಳ್ಳಾರಿ-ಸಣ್ಣ ಫಕೀರಪ್ಪ, ತುರುವೇಕೆರೆ-ಮಸಾಲೆ ಜಯರಾಂ ಹಾಗೂ ಶಿವಾಜಿನಗರದಿಂದ ಕಟ್ಟಾಸುಬ್ರಮಣ್ಯ ನಾಯ್ಡು, ಮಳವಳ್ಳಿ- ಬಿ.ಸೋಮಶೇಖರ್ ಸೇರಿದಂತೆ 82 ಮಂದಿಗೆ ಟಿಕೆಟ್ ನೀಡಲಾಗಿದೆ.

ಈಗಾಗಲೇ 72ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಇದೀಗ 82 ಅಭ್ಯರ್ಥಿಗಳ ಎರಡನೆ ಪಟ್ಟಿ ಸೇರಿ ಒಟ್ಟು 154 ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದ್ದು, ಇನ್ನೂ 70 ಕ್ಷೇತ್ರಗಳಿಗೆ ಒಂದೇರಡು ದಿನಗಳಲ್ಲಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಮೊದಲ ಪಟ್ಟಿಯಲ್ಲಿ ಸಂಸದರಾದ ಯಡಿಯೂರಪ್ಪ, ಬಿ.ಶ್ರೀರಾಮುಲು, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಪರಿಷತ್ ಸದಸ್ಯರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ ಯತ್ನಾಳ ಸೇರಿ ಹಲವು ಪ್ರಮುಖ ಮುಖಂಡರು ಟಿಕೆಟ್ ಗಿಟ್ಟಿಸಿಕೊಂಡಿದ್ದರು.

ಬಿಜೆಪಿ ಅಭ್ಯರ್ಥಿಗಳ ಎರಡನೆ ಪಟ್ಟಿ:
ಬೆಳಗಾವಿ ಜಿಲ್ಲೆ: ಚಿಕ್ಕೋಡಿ ಸದಲಗ-ಅಣ್ಣಾ ಸಾಹೇಬ ಜೊಲ್ಲೆ, ಗೋಕಾಕ್- ಅಶೋಕ್ ಪೂಜಾರಿ, ಯಮಕನಮರಡಿ(ಪ.ಪಂ)-ಮಾರುತಿ ಅಷ್ಟಗಿ, ರಾಮದುರ್ಗ- ಮಹಾದೇವಪ್ಪ ಎಸ್.ಯಾದವಾಡ್.

ಬಾಗಲಕೋಟೆ: ತೇರದಾಳ-ಸಿದ್ದು ಸವದಿ, ಜಮಖಂಡಿ- ಶ್ರೀಕಾಂತ್ ಕುಲಕರ್ಣಿ, ಬೀಳಗಿ-ಮುರುಗೇಶ್ ನಿರಾಣಿ, ಬಾಗಲಕೋಟೆ-ವೀರಣ್ಣ ಚರಂತಿಮಠ, ಹುನುಗುಂದ-ದೊಡ್ಡನಗೌಡ ಜಿ.ಪಾಟೀಲ.

ವಿಜಯಪುರ: ದೇವರ ಹಿಪ್ಪರಗಿ-ಸೋಮನಗೌಡ ಪಾಟೀಲ್(ಸಾಸನೂರ್), ಇಂಡಿ-ದಯಾಸಾಗರ್ ಪಾಟೀಲ್. ಕಲಬುರ್ಗಿ ಜಿಲ್ಲೆ: ಜೇವರ್ಗಿ-ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಯಾದಗಿರಿ-ವೆಂಕಟರೆಡ್ಡಿ ಮುದ್ನಾಳ್, ಗುರುಮಿಠ್ಕಲ್- ಸಾಹೇಬಣ್ಣ ಬೊರಬಂದ, ಸೇಡಂ-ರಾಜ್‌ಕುಮಾರ್ ಪಾಟೀಲ್ ತೆಲ್ಕೂರು, ಗುಲ್ಬರ್ಗಾ ಉತ್ತರ-ಚಂದ್ರಕಾಂತ್ ಪಾಟೀಲ್.

ಬೀದರ್-ಸೂರ್ಯಕಾಂತ್ ನಾಗಮಾರಪಲ್ಲಿ, ಬಾಲ್ಕಿ- ಡಿ.ಕೆ.ಸಿದ್ದರಾಮ, ಮಸ್ಕಿ (ಪ.ಪಂ)-ಬಸವನಗೌಡ ತುರವಿಹಾಳ್, ಕನಕಗಿರಿ (ಪ.ಪಂ.)-ಬಸವರಾಜ್ ದಾಡೇಸಾಗರ್, ಗಂಗಾವತಿ-ಪರಣ್ಣ ಮನವಳ್ಳಿ, ಯಲಬುರ್ಗಾ-ಹಾಲಪ್ಪ ಬಸಪ್ಪ ಆಚಾರ್, ಕೊಪ್ಪಳ-ಸಿ.ವಿ.ಚಂದ್ರಶೇಖರ್, ಶಿರಹಟ್ಟಿ(ಎಸ್ಸಿ)-ರಾಮಣ್ಣ ಲಮಾಣಿ, ಗದಗ-ಅನಿಲ್ ಮೆಣಸಿನಕಾಯಿ, ರೋಣ-ಕಲಕಪ್ಪ ಬಂಡಿ, ನರಗುಂದ- ಸಿ.ಸಿ. ಪಾಟೀಲ್, ನವಲಗುಂದ-ಶಂಕರ್‌ಗೌಡ ಪಾಟೀಲ್ ಮುನೇನಕೊಪ್ಪ, ಕಲಘಟಗಿ- ಮಹೇಶ್ ತೆಂಗಿನಕಾಯಿ.

ಹಳಿಯಾಳ-ಸುನೀಲ್ ಹೆಗ್ಡೆ, ಭಟ್ಕಳ-ಸುನೀಲ್‌ನಾಯ್ಕೆ, ಯಲ್ಲಾಪುರ-ವಿ.ಎಸ್. ಪಾಟೀಲ್, ಬ್ಯಾಡಗಿ-ವಿರೂಪಾಕ್ಷಪ್ಪ ಬಳ್ಳಾರಿ, ಹಡಗಲಿ(ಎಸ್ಸಿ) -ಚಂದ್ರ ನಾಯ್ಕಿ, ಹಗರಿಬೊಮ್ಮನಹಳ್ಳಿ(ಎಸ್ಸಿ)- ನೇಮಿರಾಜ್ ನಾಯ್ಕಿ, ಸಿರಗುಪ್ಪ(ಎಸ್ಟಿ)-ಎಂ.ಎಸ್. ಸೋಮಲಿಂಗಪ್ಪ, ಬಳ್ಳಾರಿ(ಎಸ್ಟಿ)-ಸಣ್ಣಫಕೀರಪ್ಪ, ಬಳ್ಳಾರಿ ನಗರ-ಜಿ.ಸೋಮಶೇಖರ್ ರೆಡ್ಡಿ.

ಚಿತ್ರದುರ್ಗ ಜಿಲ್ಲೆ: ಚಳ್ಳಕೆರೆ(ಎಸ್ಟಿ)-ಕೆ.ಟಿ.ಕುಮಾರಸ್ವಾಮಿ, ಹೊಳಲ್ಕೆರೆ (ಎಸ್ಸಿ)- ಎಂ.ಚಂದ್ರಪ್ಪ, ಚನ್ನಗಿರಿ-ಮಾಡಾಳ್ ವಿರೂಪಾಕ್ಷಪ್ಪ, ಹೊನ್ನಾಳಿ- ಎಂ.ಪಿ. ರೇಣುಕಾಚಾರ್ಯ, ಶಿವಮೊಗ್ಗ ಗ್ರಾಮೀಣ(ಎಸ್ಸಿ)-ಅಶೋಕ್ ನಾಯ್ಕಿ, ತೀರ್ಥಹಳ್ಳಿ -ಅರಗ ಜ್ಞಾನೇಂದ್ರ, ಸೊರಬ-ಕುಮಾರ್ ಬಂಗಾರಪ್ಪ, ಸಾಗರ-ಹರತಾಳು ಹಾಲಪ್ಪ.
ಬೈಂದೂರು- ಬಿ.ಸುಕುಮಾರ್ ಶೆಟ್ಟಿ, ಕಡೂರು-ಬೆಳ್ಳಿಪ್ರಕಾಶ್, ಚಿಕ್ಕನಾಯಕನ ಹಳ್ಳಿ-ಜೆ.ಸಿ.ಮಧುಸ್ವಾಮಿ, ತಿಪಟೂರು-ಬಿ.ಸಿ.ನಾಗೇಶ್, ತುರುವೇಕೆರೆ-ಮಸಾಲೆ ಜಯರಾಂ, ತುಮಕೂರು ನಗರ-ಜಿ.ಬಿ.ಜ್ಯೋತಿ ಗಣೇಶ್, ಕೊರಟಗೆರೆ(ಎಸ್ಸಿ)-ವೈ.ಹುಚ್ಚಯ್ಯ, ಗುಬ್ಬಿ-ಬೆಟ್ಟಸ್ವಾಮಿ, ಶಿರಾ-ಬಿ.ಕೆ.ಮಂಜುನಾಥ್, ಮಧುಗಿರಿ- ಎಂ.ಆರ್.ಹುಲಿನಾಯ್ಕರ್.

ಚಿಕ್ಕಬಳ್ಳಾಪುರ-ಡಾ.ಮಂಜುನಾಥ್, ಬಂಗಾರಪೇಟೆ (ಎಸ್ಸಿ)-ಬಿ.ಪಿ.ವೆಂಕಟ ಮುನಿಯಪ್ಪ, ಕೋಲಾರ-ಓಂ ಶಕ್ತಿಚಲಪತಿ, ಮಾಲೂರು-ಕೃಷ್ಣಯ್ಯ ಶೆಟ್ಟಿ, ಕೆ.ಆರ್. ಪುರಂ-ನಂದೀಶ್‌ರೆಡ್ಡಿ, ಬ್ಯಾಟರಾಯನಪುರ-ಎ.ರವಿ, ಮಹಾಲಕ್ಷ್ಮಿಲೇಔಟ್- ನೆ.ಲ. ನರೇಂದ್ರಬಾಬು, ಶಿವಾಜಿನಗರ-ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಂತಿನಗರ- ವಾಸುದೇವ್ ಮೂರ್ತಿ, ವಿಜಯನಗರ-ಎಚ್.ರವೀಂದ್ರ, ದೊಡ್ಡಬಳ್ಳಾಪುರ- ಜೆ.ನರಸಿಂಹಸ್ವಾಮಿ, ಮಾಗಡಿ-ಹನುಮಂತರಾಜು, ಮಳವಳ್ಳಿ (ಎಸ್ಸಿ)- ಬಿ. ಸೋಮಶೇಖರ್, ಅರಕಲಗೂಡು-ಎಚ್.ಯೋಗಾ ರಮೇಶ್.

ಬೆಳ್ತಂಗಡಿ-ಹರೀಶ್ ಪೂಂಜ, ಮೂಡಬಿದರೆ-ಉಮಾನಾಥ್ ಕೋಟ್ಯಾನ್, ಬಂಟ್ವಾಳ್-ಯು.ರಾಜೇಶ್ ನಾಯಕ್, ಪುತ್ತೂರು-ಸಂಜೀವ್ ಮತ್ತಂದೂರು, ಪಿರಿಯಾಪಟ್ಟಣ-ಎಸ್.ಮಂಜುನಾಥ್, ಹೆಗ್ಗಡದೇವನಕೋಟೆ (ಎಸ್ಸಿ)-ಸಿದ್ದರಾಜು, ನಂಜನಗೂಡು(ಎಸ್ಸಿ)-ಹರ್ಷವರ್ಧನ್, ನರಸಿಂಹರಾಜ-ಎಸ್.ಸತೀಶ್(ಸಂದೇಶ್ ಸ್ವಾಮಿ), ಹನೂರು-ಡಾ.ಪ್ರೀತಮ್‌ನಾಗಪ್ಪ, ಕೊಳ್ಳೆಗಾಲ (ಎಸ್ಸಿ)-ಜಿ.ಎನ್. ನಂಜುಂಡಸ್ವಾಮಿ, ಚಾಮರಾಜನಗರ-ಪ್ರೊ.ಮಲ್ಲಿಕಾರ್ಜುನಪ್ಪ, ಗುಂಡ್ಲುೇಟೆ- ಎಚ್.ಎಸ್.ನಿರಂಜನ್ ಕುಮಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News