ಕಥುವಾ ಪೈಶಾಚಿಕ ಘಟನೆಯಂತಹ ಹೀನಕೃತ್ಯಗಳು ನಾಚಿಕೆಗೇಡು: ರಾಷ್ಟ್ರಪತಿ ರಾಮನಾಥ್ ಕೋವಿಂದ್

Update: 2018-04-18 07:47 GMT

ಹೊಸದಿಲ್ಲಿ, ಎ.18: ಪೈಶಾಚಿಕ ಕಥುವಾ ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿರುವ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಭಾರತವು ಯಾವ ರೀತಿಯ ಸಮಾಜದೆಡೆಗೆ ಭಾರತವು ಬದಲಾವಣೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾದರೂ ಕಥುವಾ ಬಾಲಕಿಯ ಅತ್ಯಾಚಾರ, ಕೊಲೆಯಂತಹ ಹೀನಕೃತ್ಯಗಳು ದೇಶದಲ್ಲಿ ನಡೆಯುತ್ತಿರುವುದು ನಾಚಿಕೆಗೇಡಿನ ವಿಷಯ ಎಂದವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಶ್ರೀ ಮಾತ ವೈಷ್ಣೋದೇವಿ ಯುನಿವರ್ಸಿಟಿಯ 6ನೆ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

“ಸ್ವಾತಂತ್ರ್ಯ ಲಭಿಸಿದ ನಂತರ ದೇಶದ ಯಾವುದಾದರೂ ಭಾಗದಲ್ಲಿ ಇಂತಹ ಘಟನೆಗಳು ನಡೆಯುವುದು ನಿಜಕ್ಕೂ ನಾಚಿಕೆಗೇಡು. ನಾವು ಎಂತಹ ಸಮಾಜವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ನಾವು ಯೋಚಿಸಬೇಕು. ಯಾವುದೇ ಮಹಿಳೆ ಅಥವಾ ಹೆಣ್ಣುಮಗುವಿನ ಮೇಲೆ ಅಂತಹ ಕೃತ್ಯಗಳು ನಡೆಯುವುದಿಲ್ಲ ಎಂದು ಖಚಿತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News