ಇರಾಕ್: 300ಕ್ಕೂ ಅಧಿಕ ಐಸಿಸ್ ಉಗ್ರರಿಗೆ ಗಲ್ಲು

Update: 2018-04-18 15:56 GMT

ಬಗ್ದಾದ್, ಎ. 18: ಹತ್ತಾರು ವಿದೇಶೀಯರು ಸೇರಿದಂತೆ ಐಸಿಸ್ ಉಗ್ರ ಸಂಘಟನೆಯ 300ಕ್ಕೂ ಅಧಿಕ ಸದಸ್ಯರಿಗೆ ಇರಾಕ್‌ನ ನ್ಯಾಯಾಲಯಗಳು ಮರಣ ದಂಡನೆ ವಿಧಿಸಿವೆ ಎಂದು ನ್ಯಾಯಾಂಗ ಮೂಲಗಳು ಬುಧವಾರ ತಿಳಿಸಿವೆ.

ಐಸಿಸ್ ಶಂಕಿತರ ವಿಚಾರಣೆಯನ್ನು ಎರಡು ನ್ಯಾಯಾಲಯಗಳಲ್ಲಿ ನಡೆಸಲಾಗುತ್ತಿದೆ. ಒಂದು ಉತ್ತರ ಇರಾಕ್‌ನ ಮೊಸುಲ್‌ನಲ್ಲಿ ಹಾಗೂ ಇನ್ನೊಂದು ರಾಜಧಾನಿ ಬಗ್ದಾದ್‌ನಲ್ಲಿ. ಬಗ್ದಾದ್‌ನಲ್ಲಿ ಮುಖ್ಯವಾಗಿ ವಿದೇಶೀಯರು ಮತ್ತು ಮಹಿಳೆಯರ ವಿಚಾರಣೆಯನ್ನು ನಡೆಸಲಾಗುತ್ತಿದೆ.

ಇರಾಕ್‌ನಲ್ಲಿ ಜನವರಿಯಿಂದೀಚೆಗೆ 97 ವಿದೇಶೀಯರಿಗೆ ಗಲ್ಲು ಹಾಗೂ 185 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಶಿಕ್ಷೆಗೊಳಗಾದ ಮಹಿಳೆಯರ ಪೈಕಿ ಹೆಚ್ಚಿನವರು ಟರ್ಕಿ ಮತ್ತು ಮಾಜಿ ಸೋವಿಯತ್ ಒಕ್ಕೂಟದ ದೇಶಗಳಿಂದ ಬಂದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News