ಮಡಿಕೇರಿ: ಮೇಕೇರಿ ದರ್ಗಾ ಉರೂಸ್‍ಗೆ ಎ.20 ರಂದು ಚಾಲನೆ

Update: 2018-04-19 11:40 GMT

ಮಡಿಕೇರಿ,ಎ.19: ಮಡಿಕೇರಿ ತಾಲೂಕಿನ ಮೇಕೇರಿ ದರ್ಗಾ ಶರೀಫಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಹಝ್ರತ್ ಸಯ್ಯಿದ್ ಸುಲ್ತಾನ್ ಆಲಿಷಾ ಮದನಿಯವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಮಖಾಂ ಉರೂಸ್ ಎ.20 ರಿಂದ 23ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮೇಕೇರಿ ಮಸೀದಿಯ ಧರ್ಮಗುರುಗಳಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾತನಾಡಿ,ಎ.20 ರಂದು ಜುಮಾ ನಮಾಜಿನ ಬಳಿಕ ತಾವು ಉರೂಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ರಾತ್ರಿ ಖತ್ತಂ ದುಅ ಧಾರ್ಮಿಕ ಉಪನ್ಯಾಸದ ನೇತೃತ್ವವನ್ನು ಸುಳ್ಯದ ಅಸ್ಸಯ್ಯಿದ್ ಕುಂಞಕೋಯ ತಂಙಳ್ ಅಸ್ಸಹದಿ ವಹಿಸಲಿದ್ದಾರೆಂದು ಮಾಹಿತಿ ನೀಡಿದರು. 

ಎ.21 ರಂದು ರಾತ್ರಿ ಜಲಾಲಿಯ್ಯ ರಾತೀಬ್ ನೇತೃತ್ವವನ್ನು ಅಸ್ಸಯ್ಯಿದ್ ಜಾಫರ್ ಸ್ವಾದಿಖ್ ತಂಙಳ್ ಕುಂಬೋಲ್ ವಹಿಸಲಿದ್ದಾರೆ. ಎ. 22 ರಂದು ರಾತ್ರಿ ನಡೆಯಲಿರುವ ಸಾರ್ವಜನಿಕ ಸಮಾರಂಭವನ್ನು ಅನ್ವಾರುಲ್ ಹುದಾದ ಪ್ರೊಫೆಸರ್ ಕೊಳಕೇರಿಯ ಸಿ.ಎ. ಯಾಕೂಬ್ ಮಾಸ್ಟರ್ ಉದ್ಘಾಟಿಸಲಿದ್ದಾರೆ.  ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷರಾದ ಎಂ.ಹೆಚ್. ಅಬ್ದುಲ್ ರಹಿಮಾನ್ ವಹಿಸಲಿದ್ದಾರೆಂದರು.

ಎ.23 ರಂದು ಮೌಲಿದ್ ಹಾಗೂ ಮಹ್‍ಳರತ್ತುಲ್ ಬದ್ರಿಯಾ ಕಾರ್ಯಕ್ರಮದ ನೇತೃತ್ವವನ್ನು ಅಸ್ಸಯ್ಯಿದ್ ಖಾತಿಂ ಸಖಾಫಿ ಅಲ್ ಹೈದ್ರೂಸಿ ನೇತೃತ್ವ ವಹಿಸಲಿದ್ದಾರೆ. ಅಂದು ಸಂಜೆ 3.30ಕ್ಕೆ ಸಂದಲ್ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು. ಉರೂಸ್ ಪ್ರಯುಕ್ತ ಎ. 22 ಮತ್ತು 23 ರಂದು ಸಂಜೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆಯೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಕೇರಿ ಮಸೀದಿಯ ಸದಸ್ಯರಾದ ರಫೀಕ್ ಖಾನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News