ಉನ್ನಾವೋ,ಕಥುವಾ ಅತ್ಯಾಚಾರ ಪ್ರಕರಣಗಳು ಹೇಸಿಗೆ ಹುಟ್ಟಿಸಿವೆ

Update: 2018-04-19 13:38 GMT

ಹೊಸದಿಲ್ಲಿ,ಎ.19: ಉನ್ನಾವೊ,ಕಥುವಾ ಅತ್ಯಾಚಾರ ಪ್ರಕರಣಗಳು ಹೇಸಿಗೆ ಹುಟ್ಟಿಸಿವೆ ಎಂದು ಮೋದಿ ಸರಕಾರದ ‘ಬೇಟಿ ಬಚಾವೊ ಬೇಟಿ ಪಢಾವೊ’ಆಂದೋಲನದ ರಾಯಭಾರಿಯಾಗಿರುವ ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಗುರುವಾರ ಇಲ್ಲಿ ಹೇಳಿದರು. ತನ್ನ ಮುಂಬರುವ ಚಿತ್ರ ‘102 ನಾಟ್ ಔಟ್’ನ ಹಾಡಿನ ಬಿಡುಗಡೆಗಾಗಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೋರ್ವರು ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರಗಳ ಬಗ್ಗೆ ಅಭಿಪ್ರಾಯವನ್ನು ಕೋರಿದಾಗ,ಅವು ಹೇಸಿಗೆಯನ್ನು ಹುಟ್ಟಿಸಿವೆ.ಅದರ ಬಗ್ಗೆ ಮಾತನಾಡುವುದೂ ಘೋರವಾಗಿದೆ. ದಯವಿಟ್ಟು ಆ ವಿಷಯವನ್ನೆತ್ತಬೇಡಿ ಎಂದು ಅಮಿತಾಭ್ ವಿನಂತಿಸಿಕೊಂಡರು.

ಕಥುವಾ ಮತ್ತು ಉನ್ನಾವೊ ಅತ್ಯಾಚಾರ ಪ್ರಕರಣಗಳ ಬಗ್ಗೆ ಈಗಾಗಲೇ ಹಲವಾರು ಬಾಲಿವುಡ್ ಗಣ್ಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News