ಮಕ್ಕಾ ಮಸೀದಿ ಸ್ಫೋಟ ಪ್ರಕರಣ: ನ್ಯಾಯಮೂರ್ತಿ ರವೀಂದ್ರ ರೆಡ್ಡಿ ರಾಜೀನಾಮೆ ತಿರಸ್ಕೃತ

Update: 2018-04-19 14:53 GMT

ಹೈದರಾಬಾದ್, ಎ. 19: ಮಕ್ಕಾ ಮಸೀದಿ ವಿಚಾರಣೆ ನಡೆಸಿದ ಐವರು ಆರೋಪಿಗಳನ್ನು ಮಂಗಳವಾರ ಖುಲಾಸೆಗೊಳಿಸಿ ತೀರ್ಪು ನೀಡಿದ ಬಳಿಕ ನ್ಯಾಯಮೂರ್ತಿ ಕೆ. ರವೀಂದ್ರ ರೆಡ್ಡಿ ನೀಡಿದ ರಾಜೀನಾಮೆಯನ್ನು ಹೈದರಾಬಾದ್ ಉಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ಉಚ್ಚ ನ್ಯಾಯಾಲಯ ರಜೆ ರದ್ದುಗೊಳಿಸಿದ ಬಳಿಕ ರಾಷ್ಟ್ರೀಯ ಹೈದರಾಬಾದ್‌ನಲ್ಲಿ ತನಿಖಾ ಸಂಸ್ಥೆಯ ಪ್ರಕರಣಗಳನ್ನು ನಿರ್ವಹಿಸುತ್ತಿದ್ದ ಹಿರಿಯ ನ್ಯಾಯಮೂರ್ತಿ ಕೆ. ರವೀಂದ್ರ ರೆಡ್ಡಿ ನಾಲ್ಕನೇ ಮೆಟ್ರೋಪಾಲಿಟಿನ್ ಸತ್ರ ನ್ಯಾಯಾಲಯದಲ್ಲಿ ಕರ್ತವ್ಯ ಪುನಾರಂಭಿಸಿದ್ದರು. ಅವರು ಸೋಮವಾರ 15 ದಿನಗಳ ರಜೆಯಲ್ಲಿ ತೆರಳಿದ್ದರು. ರೆಡ್ಡಿಯ ರಾಜೀನಾಮೆ ತಿರಸ್ಕರಿಸಲು ಉಚ್ಚ ನ್ಯಾಯಾಲಯಕ್ಕಿದ್ದ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ, ವೈಯುಕ್ತಿಕ ಕಾರಣ ಹಾಗೂ ತೆಲಂಗಾಣಕ್ಕೆ ಆದ ಅನ್ಯಾಯದ ಹಿನ್ನೆಲೆಯಲ್ಲಿ ರೆಡ್ಡಿ ರಾಜೀನಾಮೆ ನೀಡಿದ್ದಾರೆ ಎಂದು ರೆಡ್ಡಿಯ ಆಪ್ತರು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಅತಿಸೂಕ್ಷ್ಮ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸುವಂತೆ ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ರೆಡ್ಡಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಈಗಾಗಲೇ ವದಂತಿ ಹರಡಿದೆ. ಕಳೆದ ವರ್ಷ ನಕಲಿ ದಾಖಲೆ ಪತ್ರ ರೂಪಿಸಿದ ಕಡಪಾ ಲಿಯಾಲ್ಟರ್ ಅವರಿಗೆ ಅಸಮರ್ಪಕ ರೀತಿಯಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ರೆಡ್ಡಿ ಭಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. 2017 ಡಿಸೆಂಬರ್ 11ರಂದು ಹೈದರಾಬಾದ್‌ನ ಉದ್ಯಮಿ ಎಂ. ಕೃಷ್ಣರೆಡ್ಡಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ಈ ಆರೋಪ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News