ಸಿರಿಯದಲ್ಲಿ ಐಸಿಸ್ ವಿರುದ್ಧ ವಾಯು ದಾಳಿ: ಇರಾಕ್

Update: 2018-04-19 17:34 GMT

ಬಗ್ದಾದ್, ಎ. 19: ಸಿರಿಯದಲ್ಲಿರುವ ಐಸಿಸ್ ನೆಲೆಗಳ ಮೇಲೆ ಇರಾಕ್ ವಾಯು ಪಡೆ ಗುರುವಾರ ‘ಮಾರಕ ದಾಳಿ’ ನಡೆಸಿರುವುದಾಗಿ ಇರಾಕ್ ಪ್ರಧಾನಿ ಹೈದರ್ ಅಲ-ಅಬಾದಿ ಕಚೇರಿ ತಿಳಿಸಿದೆ.

 ‘‘ಇರಾಕ್ ಭೂಭಾಗಕ್ಕೆ ಐಸಿಸ್ ಭಯೋತ್ಪಾದಕರು ಬೆದರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ’’ ಎಂದು ಹೇಳಿಕೆಯೊಂದು ತಿಳಿಸಿದೆ.

ಎರಡು ಎಫ್-16 ಯುದ್ಧ ವಿಮಾನಗಳು ದಾಳಿಯಲ್ಲಿ ಭಾಗವಹಿಸಿರುವುದನ್ನು ವೀಡಿಯೊವೊಂದು ತೋರಿಸಿದೆ.

ಇರಾಕ್ ಐಸಿಸ್ ವಿರುದ್ಧ ಡಿಸೆಂಬರ್‌ನಲ್ಲಿ ವಿಜಯವನ್ನು ಘೋಷಿಸಿದೆಯಾದರೂ, ಸಿರಿಯ ಗಡಿಯಲ್ಲಿರುವ ಮರುಭೂಮಿಯ ಹಲವು ಸ್ಥಳಗಳಲ್ಲಿ ಅವರು ನಿಯಂತ್ರಣ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News