ಅಮೆರಿಕದಲ್ಲಿರುವ ಪಾಕ್ ರಾಜತಾಂತ್ರಿಕರ ಮೇಲೆ ಪ್ರಯಾಣ ನಿರ್ಬಂಧ

Update: 2018-04-19 18:01 GMT

ಇಸ್ಲಾಮಾಬಾದ್, ಎ. 19: ಪಾಕಿಸ್ತಾನದ ಮಾದರಿಯಲ್ಲೇ, ಅಮೆರಿಕದಲ್ಲಿರುವ ಪಾಕಿಸ್ತಾನಿ ರಾಜತಾಂತ್ರಿಕರಿಗೂ ಮೇ 1ರಿಂದ ಅನ್ವಯವಾಗುವಂತೆ ಪ್ರಯಾಣ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಹೇಳಿದೆ.

ಈ ನಿರ್ಬಂಧದ ಪ್ರಕಾರ, ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್ ಕಚೇರಿಗಳಿಗೆ ನಿಯೋಜಿತರಾದ ರಾಜತಾಂತ್ರಿಕರು ತಮ್ಮ ಕಚೇರಿಗಳಿಂದ 40 ಕಿ.ಮೀ. ವ್ಯಾಪ್ತಿಯ ಒಳಗೆ ಮಾತ್ರ ಒಡಾಡಬಹುದು.

 ಪಾಕಿಸ್ತಾನದಲ್ಲಿರುವ ಅಮೆರಿಕದ ರಾಜತಾಂತ್ರಿಕರಿಗೆ ಈ ನಿರ್ಬಂಧ ವಿಧಿಸಲಾಗಿರುವ ಹಿನ್ನೆಲೆಯಲ್ಲಿ, ಅದೇ ಮಾದರಿಯಲ್ಲಿ ಅಮೆರಿಕದಲ್ಲಿರುವ ಪಾಕಿಸ್ತಾನಿ ರಾಜತಾಂತ್ರಿಕರಿಗೂ ಅದೇ ನಿರ್ಬಂಧವನ್ನು ವಿಧಿಸಲಾಗಿದೆ ಎಂದು ಅಮೆರಿಕದ ವಿದೇಶ ವ್ಯವಹಾರಗಳ ಅಧೀನ ಕಾರ್ಯದರ್ಶಿ ಥಾಮಸ್ ಶಾನನ್ ಹೇಳಿದರು.

‘‘ನಮ್ಮ ರಾಜತಾಂತ್ರಿಕರಿಗೆ ಪ್ರಯಾಣ ನಿರ್ಬಂಧವನ್ನು ವಿಧಿಸಲಾಗಿದೆ. ಅವರು ನಿಗದಿತ 40 ಕಿ.ಮೀ. ವ್ಯಾಪ್ತಿಯಿಂದ ಹೊರಗೂ ಪ್ರಯಾಣಿಸಬಹುದಾಗಿದೆ. ಆದರೆ ಅದನ್ನು ಅವರು ಪಾಕಿಸ್ತಾನ ಸರಕಾರಕ್ಕೆ ತಿಳಿಸಬೇಕಾಗುತ್ತದೆ’’ ಎಂದು ಅವರು ‘ವಾಯ್ಸೆ ಆಫ್ ಅಮೆರಿಕ’ದ ಉಝ್ಬೆಕ್ ಸರ್ವಿಸ್‌ಗೆ ತಿಳಿಸಿದರು.

‘‘ಸಾಮಾನ್ಯವಾಗಿ ಇಂಥ ನಿರ್ಬಂಧಗಳನ್ನು ಪ್ರತೀಕಾರವಾಗಿ ಹೇರಲಾಗುತ್ತದೆ. ಹಾಗಾಗಿ, ನಾನು ಅದನ್ನು ಇಲ್ಲಿಯೇ ಬಿಟ್ಟುಬಿಡುತ್ತೇನೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News