ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ ಪುತ್ರ !

Update: 2018-04-22 16:19 GMT

ಪಾಟ್ನಾ, ಎ. 22: ಇಪ್ಪತ್ತೆರೆಡು ವರ್ಷದ ಯುವಕನೋರ್ವ ತನ್ನ ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ಗುಜರಾತ್‌ನ ಪಠಾನ್ ಪಟ್ಟಣದ ಜಲ್‌ಚೌಕ್ ಪ್ರದೇಶದಲ್ಲಿ ನಡೆದಿದೆ. ಆರೋಪಿ ಯುವಕನನ್ನು ಬಂಧಿಸಲಾಗಿದೆ.

ತಾಯಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಯುವಕ ಈ ಕೃತ್ಯ ಎಸಗಿದ್ದಾನೆ. ನೀರು ಕೇಳುವ ನೆಪದಲ್ಲಿ ಕೊಠಡಿಯ ಒಳಗೆ ಬಂದ ಯುವಕ ತಾಯಿಯನ್ನು ಬಲವಂತವಾಗಿ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ರಾತ್ರಿ 1 ಗಂಟೆ ಹೊತ್ತಿಗೆ ತಾಯಿಯ ಬಾಯಿಗೆ ಬಟ್ಟೆ ತುರುಕಿದ್ದ ಯುವಕ ಅನಂತರ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯ ದೂರನ್ನು ಆಧರಿಸಿ ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಕೂಡ ತನ್ನ ಪುತ್ರ ಲೈಂಗಿಕ ಬಯಕೆ ತೋಡಿಕೊಂಡಿದ್ದ ಎಂದು ದಾಖಲಿಸಿದ ದೂರಿನಲ್ಲಿ ಮಹಿಳೆ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News