ಕೊಳ್ಳೇಗಾಲ: ಎನ್.ಮಹೇಶ್ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಬಿಎಸ್ಪಿ ಸೇರ್ಪಡೆ

Update: 2018-04-22 16:58 GMT

ಕೊಳ್ಳೇಗಾಲ,ಎ.22: ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರುಗಳು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು  ಬಹುಜನ ಸಮಾಜ ಪಾರ್ಟಿಗೆ ಪಕ್ಷದ ರಾಜ್ಯಾಧ್ಯಕ್ಷ ಎನ್.ಮಹೇಶ್ ನೇತೃತ್ವದಲ್ಲಿ ರವಿವಾರ ಸೇರ್ಪಡೆಯಾದರು.

ಪಟ್ಟಣದ ಬಿಎಸ್ಪಿ ಕಛೇರಿಯಲ್ಲಿ ಇಂದು ನಡೆದ ಬಿಎಸ್ಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಕ್ಷೇತ್ರದ ಎಸ್.ಜಯಣ್ಣರವರ ಬಂಟ ಮಾಜಿ ತಾ.ಪಂ ಸದಸ್ಯ ಬಸವಣ್ಣ, ವೀರಶೈವ ಮುಖಂಡ ಗಣಿ ಉದ್ಯಮಿ ವೀರಮಾದು, ತೀಮ್ಮರಾಜಿಪುರ ಪುಟ್ಟಣ್ಣ, ದುಂಡಪ್ಪ, ವೀರಭದ್ರಸ್ವಾಮಿ, ಸೋಮಣ್ಣ, ಲೋಕೇಶ್, ಉದಯಕುಮಾರ್, ರವೀಂದ್ರ,  ಜಾಕಿ ಸುರೇಶ್, ಐ.ಪಿ.ಎಸ್.ರಾಜಪ್ಪ, ಸುರೇಶ್, ಕೃಷ್ಣಮೂರ್ತಿ, ಹಾಗೂ ಗ್ರಾ.ಪಂ ಹಾಲಿ ಮತ್ತು ಮಾಜಿ ಸದಸ್ಯರುಗಳು, ಮುಖಂಡರುಗಳು ಸೇರಿದಂತೆ ಸುಮಾರು 150 ಕ್ಕೂ ಹೆಚ್ಚು ಮಂದಿ ಸೇರ್ಪಡೆಯಾದರು.

ನಂತರ ಜೆಡಿಎಸ್ ಬೆಂಬಲಿತ ಬಿಎಸ್ಪಿ ಅಭ್ಯರ್ಥಿ ಎನ್.ಮಹೇಶ್ ಮಾತನಾಡಿ, ಕ್ಷೇತ್ರವನ್ನು ಅಭಿವೃದ್ಧಿ ಪಥಕ್ಕೆ ಕೊಂಡೋಯ್ಯುವ ಸಲುವಾಗಿ ಈ ಬಾರಿ ಚುನಾವಣೆಯಲ್ಲಿ ಬಿಎಸ್‍ಪಿ ಪಕ್ಷ ಗೆಲ್ಲಲೆಬೇಕಾಗಿದೆ. ಇಂದು ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರುಗಳಿಂದ ಬಲ ಹೆಚ್ಚಾಗಿದೆ. ಅವರಿಗೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ನೀಡುತ್ತಿದ್ದ ಸ್ಥಾನಮಾನದ ಹತ್ತು ಪಟ್ಟು ಹೆಚ್ಚು ನಾವು ಕೊಡುತ್ತೇವೆ ಎಂದು ಭರವಸೆ ನೀಡಿದರು.

ನಾನು ಸ್ಪರ್ಧಿಸಿದ ಎಲ್ಲಾ ಚುನಾವಣೆಯಲ್ಲಿ ಹಂತ ಹಂತವಾಗಿ ಹೆಚ್ಚು ಮತ ಬಂದಿರುವುದರಿಂದ ನಾನು ಚುನಾವಣೆ ವಿಮುಕ್ತನಾಗದೇ ಪಕ್ಷದಲ್ಲಿ ಭದ್ರವಾಗಿ ಉಳಿದುಕೊಂಡಿದ್ದೇನೆ ಎಂದರು. ನಮ್ಮ ಕಾರ್ಯಕರ್ತರ ಮನಸ್ಥಿ ಅರ್ಥ ಮಾಡಿಕೊಂಡು ಪಕ್ಷಕ್ಕೆ ಸೇರ್ಪಡೆಯಾದ ಎಲ್ಲಾ ಮುಖಂಡರುಗಳಿಗೆ ಧನ್ಯವಾದಗಳು ಎಂದರು. 

ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಎರಡು ಬಾರಿ ಶಾಸಕರಾಗಿ ನೀಡಿದ್ದೀರಿ. ಆದರೆ ಕಳೆದ  20 ವರ್ಷಗಳಿಂದ ಜನರ ಸೇವೆ ಮಾಡುತ್ತಾ ಬಂದಿರುವ ನನಗೆ ಈ ಬಾರಿ ಅವಕಾಶ ಮಾಡಿಕೊಂಡಬೇಕು ಎಂದು ಮನವಿ ಮಾಡಿದರು.

ಈ ಕ್ಷೇತ್ರದ ಮತದಾರರು ಮೂರು ಬಾರಿ ನನ್ನನ್ನು ಸೋಲಿಸಿದ್ದಾರೆ. ಇದು ನನ್ನ ಮಹತೃದ ಚುನಾವಣೆಯಾಗಿದ್ದು, ಈ ಬಾರಿ ನನ್ನನ್ನು ಗೆಲ್ಲಿಸಿದರೆ ಕೊಳ್ಳೇಗಾಲ ಕ್ಷೇತ್ರವನ್ನು ರಾಜ್ಯದಲ್ಲೇ ನಂಬರ್ ಓನ್ ಕ್ಷೇತ್ರವನ್ನಾಗಿ ಅಭಿವೃದ್ದಿ ಮಾಡುತ್ತೇನೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ವೀರಶ್ಯವ ಮುಖಂಡ ಮಾದಪ್ಪ, ಜಿಲ್ಲಾಧ್ಯಕ್ಷ ಬಾಗಲಿ ರೇವಣ್ಣ, ಯಳಂದೂರು ತಾ.ಪಂ ಸದಸ್ಯ ನಾಗರಾಜು ಉಪ್ಪಾರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಾಮರಾಜು, ರಮೇಶ್, ರವೀಂದ್ರ, ಬಿಎಸ್ಪಿ ಮರಳ್ಳಿ ಪಟೇಲ್, ವಕೀಲ ನಟರಾಜಪ್ಪ, ಕೆಂಪರಾಜು, ಮಹೇಶ್,  ಸೋಮಣ್ಣ, ರಂಗಸ್ವಾಮಿ, ರಾಮಕೃಷ್ಣ, ಸೇರಿದಂತೆ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News