ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಮೂರ್ತಿಗಳ ಸುದೀರ್ಘ ಸಭೆ !

Update: 2018-04-23 06:37 GMT

ಹೊಸದಿಲ್ಲಿ, ಎ.23: ಸುಪ್ರೀಂ ಕೋರ್ಟ್ ನಲ್ಲಿ ಪ್ರತಿದಿನ  ನ್ಯಾಯಪೀಠಗಳಿಗೆ ಪ್ರಕರಣಗಳ ಹಂಚಿಕೆಗೆ ಸಂಬಂಧಿಸಿ ನ್ಯಾಯಮೂರ್ತಿ ಗಳ  ಸಭೆ ಕಲಾಪ ಆರಂಭಕ್ಕೂ ಮುನ್ನ ಇರುತ್ತದೆ. ಆದರೆ  ಅದು 5 ನಿಮಿಷಗಳಲ್ಲೇ  ಮುಗಿಯುತ್ತದೆ.ಸೋಮವಾರ  20 ನಿಮಿಷಗಳ  ನ್ಯಾಯಮೂರ್ತಿಗಳ   ಸಭೆ ನಡೆಯಿತು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಪದಚ್ಯುತಿ ಪ್ರಸ್ತಾವನೆಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿ ಗಳ ಸಭೆ  20 ನಿಮಿಷಗಳ ಕಾಲ ನಡೆಯಿತು. ಈ ಕಾರಣದಿಂದಾಗಿ ಕಲಾಪ ತಡವಾಗಿ ಆರಂಭಗೊಂಡಿತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News