ರೈಲ್ವೆ ಬೋರ್ಡ್ ಅಧ್ಯಕ್ಷರಿಂದ ಹಿರಿಯ ಅಧಿಕಾರಿಗಳಿಗೆ ಬಂದಿದೆ ಈ ವಿಶಿಷ್ಟ ನಿರ್ದೇಶನ

Update: 2018-04-23 09:33 GMT
ಅಶ್ವನಿ ಲೋಹನಿ

ಹೊಸದಿಲ್ಲಿ, ಎ. 23: ಭಾರತೀಯ ರೈಲ್ವೆಯಲ್ಲಿನ ಉದ್ಯೋಗ ಕಾರ್ಯಕ್ಷೇತ್ರದ ಸಂಸ್ಕೃತಿಯನ್ನು ಬದಲಾಯಿಸುವ ಯತ್ನವಾಗಿ ಹಾಗೂ ಉದ್ಯೋಗಿಗಳೆಲ್ಲರೂ ಅತ್ಯುನ್ನತ ಸಂಸ್ಕೃತಿಯನ್ನು ಕೆಲಸದ ಸ್ಥಳದಲ್ಲಿ ಕಾಪಾಡಿಕೊಂಡು ಬರುವ ಉದ್ದೇಶದಿಂದ ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಲೋಹನಿ ರೈಲ್ವೆಯ ಎಲ್ಲಾ ವಿಭಾಗೀಯ ಮ್ಯಾನೇಜರುಗಳು, ಜನರಲ್ ಮ್ಯಾನೇಜರುಗಳು ಹಾಗೂ ಪಿಎಚ್‌ಒಡಿಗಳಿಗೆ ಸೂಚನೆಯೊಂದನ್ನು ನೀಡಿ ತಮ್ಮ ಎಲ್ಲಾ ಕಿರಿಯ ಉದ್ಯೋಗಿಗಳನ್ನು ಗೌರವದಿಂದ ಸಂಬೋಧಿಸುವಂತೆ ಹಾಗೂ ಅವರನ್ನು ನೀನು ಎಂದು ಕರೆಯುವ ಬದಲು ನೀವು ಎಂದು ಸಂಬೋಧಿಸಬೇಕು ಎಂದಿದ್ದಾರೆ.

‘‘ನಮ್ಮ ಸಂಸ್ಥೆಯ ಉದ್ಯೋಗ ಕ್ಷೇತ್ರದ ಸಂಸ್ಕೃತಿ ಅತ್ಯುನ್ನತವಾಗಿರುವಂತೆ ನೋಡಿಕೊಳ್ಳಿ, ಈ ನಿಟ್ಟಿನಲ್ಲಿಯೂ ನಾಯಕತ್ವ ನೀಡಿ’’ ಎಂದು ತಮ್ಮ ಸಂದೇಶದಲ್ಲಿ ಲೋಹನಿ ತಿಳಿಸಿದ್ದಾರೆ.

ಅವರು ಈ ರೀತಿಯ ಸೂಚನೆ ನೀಡುತ್ತಿರುವುದು ಇದೇ ಮೊದಲಲ್ಲ. ಆಗಸ್ಟ್ 2017ರಲ್ಲಿ ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಕೆಲವೇ ಗಂಟೆಗಳಲ್ಲಿ ಅವರು ಭಾರತೀಯ ರೈಲ್ವೆಯಲ್ಲಿ ವಿಐಪಿ ಸಂಸ್ಕೃತಿಯನ್ನು ಅಂತ್ಯಗೊಳಿಸುವುದಾಗಿ ಆಶ್ವಾಸನೆ ನೀಡಿದ್ದರಲ್ಲದೆ ರೈಲ್ವೆ ಮಂಡಳಿ ಸದಸ್ಯರಿಗಾಗಿ 36 ವರ್ಷಗಳಿಂದ ಜಾರಿಯಲ್ಲಿದ್ದ ವಿಐಪಿ ಶಿಷ್ಟಾಚಾರವನ್ನೂ ಅಂತ್ಯಗೊಳಿಸಿದ್ದರು.

ರೈಲ್ವೆ ಮಂಡಳಿ ಅಧ್ಯಕ್ಷರು ಯಾ ಸದಸ್ಯರು ರೈಲ್ವೆ ವಲಯಗಳಿಗೆ ಭೇಟಿ ನೀಡುವಾಗ ಹಾಗೂ ನಿರ್ಗಮಿಸುವಾಗ ರೈಲ್ವೆ ಜನರಲ್ ಮ್ಯಾನೇಜರುಗಳು ಕಡ್ಡಾಯವಾಗಿ ಹಾಜರಾಗಬೇಕೆಂಬ ನಿಯಮ ಈ ಹಿಂದೆ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News