ಬಡವರ, ರೈತರ ಪರ ಕಾಂಗ್ರೆಸ್ ಸರಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-04-23 15:21 GMT

ಮೈಸೂರು,ಎ.23: ರೈತರ, ಬಡವರ ಪರ ಕಾಂಗ್ರೆಸ್ ಪಕ್ಷವಿದ್ದು, ಕಳೆದ ಐದು ವರ್ಷಗಳಲ್ಲಿ ಬಡವರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಮ್ಮ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪರ ವರುಣಾ ವಿಧಾಸಭಾ ಕ್ಷೇತ್ರದ ಹೊಸಕೋಟೆ, ಆಲತ್ತೂರು, ಹದಿನಾರು, ಹದಿನಾರು ಮೋಳೆ, ಕೆಂಪಿಸಿದ್ದನ ಹುಂಡಿ, ತಾಂಡವಪುರ, ಹಳ್ಳಿದಿಡ್ಡಿ, ಗೊದ್ದನಪುರ, ರಾಂಪುರ ಗ್ರಾಮಗಳಲ್ಲಿ ರೋಡ್ ಶೋ ನಡೆಸಿದರು.

ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಸ್ವಗ್ರಾಮ ಹದಿನಾರು ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಬಡವರ ಅಭಿವೃದ್ದಿಗೆ ಹೆಚ್ಚಿನ ನೆರವು ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದೆಯೂ ಸಹ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಇನ್ನೂ ಹೆಚ್ಚಿನ ಯೋಜನೆಗಳನ್ನು ನೀಡಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಬಸವಣ್ಣನವರ ಸಮಾನತೆಯ ಹಾದಿಯಲ್ಲಿ ನಮ್ಮ ಸರಕಾರ  ನಡೆಯುತ್ತಿದ್ದು, ಎಲ್ಲಾ ವರ್ಗ ಧರ್ಮಗಳನ್ನು ಸಮನಾಗಿ ಕಂಡು ಅಭಿವೃದ್ಧಿ ಮಾಡಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 165 ರಲ್ಲಿ 160 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದ ಅವರು, ದೇಶದಲ್ಲೇ ನಂಬರ್ ಒನ್ ಸರಕಾರ ಎಂಬ ಹೆಗ್ಗಳಿಕೆ ನಮ್ಮದು, ಹಾಗೆ 8150 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿ ರೈತಾಪಿ ವರ್ಗದ ಸರಕಾರ ಎಂದು ಕರೆಸಿಕೊಂಡಿದೆ ಎಂದರು.

ಈ ಬಾರಿ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಮತ್ತೊಮ್ಮೆ ನಿಮ್ಮ ಬಳಿ ಬರುವುದಿಲ್ಲ. ಹಾಗಾಗಿ ದಯಮಾಡಿ ತಾವುಗಳು ಈ ಬಾರಿ ನನ್ನ ಮಗ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕಾಂಗ್ರೆಸ್ ಮುಖಂಡರಾದ ಗುರುಪಾದಸ್ವಾಮಿ, ರಂಗಸ್ವಾಮಿ, ಧರ್ಮೇಂದ್ರ, ವಿಜಯಕುಮಾರ್, ಎಸ್.ಸಿ.ಬಸವರಾಜು, ಮಹದೇವ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಮೇಲೆ ಹೂವಿನ ಸುರಿಮಳೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹದಿನಾರು ಗ್ರಾಮಕ್ಕೆ ಆಗಮಿಸುತಿದ್ದಂತೆ ಅವರ ಅಭಿಮಾನಿಗಳು ವಿವಿಧ ಬಗೆಯ ಸುಮಾರು 5 ಕ್ವಿಂಟಾಲ್ ಹೂವುಗಳನ್ನು ಕ್ರೇನ್ ಮೂಲಕ ಅವರ ಮೇಲೆ ಹಾಕಿದರು.

ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪರವರ ತವರೂರಾದ ವರುಣಾ ಕ್ಷೇತ್ರದ ಹದಿನಾರು ಗ್ರಾಮದಲ್ಲಿಂದು ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯತೀಂದ್ರ ಸಿದ್ದರಾಮಯ್ಯರವರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಸಚಿವ ಹೆಚ್.ಸಿ. ಮಹದೇವಪ್ಪರವರಿಗೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರುಗಳು 5 ಕ್ವಿಂಟಾಲ್ ಹೂವನ್ನು ಕ್ರೇನ್ ಮೂಲಕ ಹೂವಿನ ಮಳೆಗೈದರು. 

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕಾಂಗ್ರೆಸ್ ಪಕ್ಷವು ಬಡವರ ಅಭಿವೃದ್ದಿಗೆ ಹೆಚ್ಚಿನ ನೆರವು ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಇನ್ನೂ ಹೆಚ್ಚಿನ ಯೋಜನೆಗಳನ್ನು ಜನರಿಗೆ ನೀಡಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಆಶೀರ್ವದಿಸಬೇಕೆಂದರಲ್ಲದೇ, ಬಸವಣ್ಣನವರು ಸಮಾನತೆ ಸಾರಿದ ತತ್ವದಡಿಯಲ್ಲಿ ಎಲ್ಲಾ ವರ್ಗಗಳ ಅಭಿವೃಧ್ದಿಗಾಗಿ ನಮ್ಮ ಸರ್ಕಾರ ನುಡಿದಂತೆ ನಡೆದು ದೇಶದಲ್ಲೆ ನಂಬರ್ ಒನ್ ಸರ್ಕಾರವೆನಿಸಿದೆ. ಹಾಗೂ 8150 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿ, ರೈತಾಪಿ ವರ್ಗದ ಸರ್ಕಾರ ಎನಿಸಿದೆ. ಆದ್ದರಿಂದ ಎಲ್ಲರೂ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ ಯತೀಂದ್ರ ಸಿದ್ದರಾಮಯ್ಯನವರನ್ನು ವಿಜಯಶಾಲಿಯಾಗುವಂತೆ ಮಾಡಬೇಕೆಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಹೆಚ್.ಎನ್.ನಂಜಪ್ಪ, ಗುರುಪಾದಸ್ವಾಮಿ, ಮುಖಂಡ ಹೆಚ್.ಸಿ.ನಿಂಗಯ್ಯ, ಪ್ರಮೋದ್ ಕುಮಾರ್, ಮಾಜಿ ಜಿ.ಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಗುರುಮಲ್ಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ತಾ.ಪಂ ಉಪಾದ್ಯಕ್ಷ ಹೆಜ್ಜಿಗೆ ಗೋವಿಂದರಾಜನ್, ಟಿ.ಕೆ. ಮಾಲೇಗೌಡ, ಹಳ್ಳಿಕೆರೆ ಹುಂಡಿ ಚಿನ್ನಸ್ವಾಮಿ, ಮಾರೇಗೌಡ, ಕೆ.ಪಿ.ಸಿ.ಸಿ ಸದಸ್ಯ ಹೆಚ್.ಸಿ.ಬಸವರಾಜು, ಮಾದೇಗೌಡ, ಹೊಸಕೋಟೆ ಕುಮಾರ್, ನಗರ್ಲೆ ಕೃಷ್ಣನಾಯಕ, ಸರ್ವೇಶ, ಚಿನ್ನಂಬಳ್ಳಿ ರಾಜು, ಇಸ್ಮಾಯಿಲ್, ಕಾರ್ಯ ಕುಮಾರ್, ಸಿದ್ದಯ್ಯಸ್ವಾಮಿ, ಬೊಕ್ಕಹಳ್ಳಿ ದೊರೆಸ್ವಾಮಿ, ಹುಳಿಮಾವು ಪರಶಿವಮೂರ್ತಿ, ಮಹದೇವಸ್ವಾಮಿ, ನರಸಿಂಹಮೂರ್ತಿ, ಮನು, ಆಲತ್ತೂರು ಚಿಕ್ಕೂಸು, ಪಾಪು, ಗಿರೀಶ್, ಕೇಬಲ್ ಸತೀಶ, ಮತ್ತು ಹದಿನಾರು ಸುತ್ತ ಮುತ್ತಲ ಗ್ರಾಮಗಳ ಮುಖಂಡರು ಸೇರಿದಂತೆ ಹಲವಾರು ಮುಖಂಡರುಗಳು, ಸಾವಿರಾರು ಕಾರ್ಯಕರ್ತರುಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News