ಬಿಹಾರ: ಮದ್ಯ ಸೇವಿಸಿ ಸಿಕ್ಕಿಬಿದ್ದ ಬಿಜೆಪಿ ಸಂಸದನ ಪುತ್ರ

Update: 2018-04-23 15:50 GMT

ಗಯಾ,ಎ.23: ಸಂಪೂರ್ಣ ಪಾನನಿಷೇಧ ಜಾರಿಯಲ್ಲಿರುವ ಬಿಹಾರದ ಗಯಾ ಬಳಿಯ ನಾಮಾ ಗ್ರಾಮದಲ್ಲಿ ರವಿವಾರ ರಾತ್ರಿ ಮದ್ಯಪಾನ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಬಿಜೆಪಿ ಸಂಸದ ಹರಿ ಮಾಂಝಿ ಅವರ ಪುತ್ರ ರಾಹುಲ್ ಕುಮಾರ್ ಮಾಂಝಿ ಮತ್ತು ಆತನ ಸ್ನೇಹಿತನನ್ನು ಪೊಲೀಸರು ಸೋಮವಾರ ನಗರದ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು,ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ಆದರೆ ಪೊಲೀಸರು ತನ್ನ ಪುತ್ರನನ್ನು ಮದ್ಯ ಸೇವನೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ ಮಾಂಝಿ ಅವರು,ನಾಮಾ ಗ್ರಾಮದಲ್ಲಿ ಮತ್ತು ಸುತ್ತಮುತ್ತ ಪೊಲೀಸರ ನೆರವಿನಿಂದ ಅಕ್ರಮ ಮದ್ಯ ವ್ಯಾಪಾರ ನಡೆಯುತ್ತಿರುವ ಬಗ್ಗೆ ತಾನು ಡಿಐಜಿಗೆ ಮಾಹಿತಿ ನೀಡಿದ್ದೆ. ಪೊಲೀಸರು ಸೂಕ್ತ ಕ್ರಮವನ್ನು ಕೈಗೊಳ್ಳುವ ಬದಲು ತನ್ನ ಪುತ್ರನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಹೇಳಿದರು.

ಮಾಂಝಿ ಎರಡನೇ ಬಾರಿ ಗಯಾದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News