ಅಭಿವೃದ್ಧಿಯಲ್ಲಿ ರಾಜ್ಯದಲ್ಲಿಯೇ ದಾವಣಗೆರೆ ಮೊದಲ ಸ್ಥಾನದಲ್ಲಿದೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

Update: 2018-04-23 17:58 GMT

ದಾವಣಗೆರೆ,ಎ.23 : ಅಭಿವೃದ್ಧಿಯಲ್ಲಿ ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲೆಯ ಮೊದಲ ಸ್ಥಾನದಲ್ಲಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. 

ಸೋಮವಾರ ಪಾಲಿಕೆಯಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ನಗರ ಸೇರಿದಂತೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ಸುಮಾರು 3 ಸಾವಿರ ಕೋಟಿ ರೂ ಗೂ ಅಧಿಕ ಅನುದಾನ ತರಲಾಗಿದೆ. ಈ ಹಿಂದಿನ ಯಾವ ಸರ್ಕಾರಗಳು ಕೂಡ ನೀಡದಷ್ಟು ಅನುದಾನವನ್ನು ಜಿಲ್ಲೆಗೆ ನೀಡಲಾಗಿದೆ. ನಮ್ಮ ಅಭಿವೃದ್ದಿ ಕಾರ್ಯಗಳೇ ನಮ್ಮ ಗೆಲುವಿಗೆ ಶ್ರೀ ರಕ್ಷೆಯಾಗಿವೆ ಎಂದರು. 

ಈ ಬಾರಿಯೂ ಉತ್ತರ ಮತ್ತು ದಕ್ಷಿಣದ ಎರಡೂ ಕ್ಷೇತ್ರಗಳಲ್ಲಿ  ಈ ಹಿಂದೆ ಗೆಲುವು ಸಾಧಿಸಿದ್ದಕ್ಕಿಂತಲೂ ಅಧಿಕ ಮತಗಳ ಅಂತರದಿಂದ ಜನರು ಗೆಲ್ಲಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು 38 ಸಾವಿರಕ್ಕೂ ಅಧಿಕ ಮತಗಳಿಂದ ನಮ್ಮನ್ನು 57 ಸಾವಿರ ಅಧಿಕ ಮತಗಳಿಂದ ಜಯಶೀಲರನ್ನಾಗಿ ಮಾಡಿದ್ದರು. ಈ ಬಾರಿ ಅದಕ್ಕಿಂತಲೂ ಅಧಿಕ ಮತಗಳಿಂದ ಜನರು ನಮ್ಮನ್ನು ಆರಿಸಲಿದ್ದಾರೆ ಎಂದು ಹೇಳಿದರು. 

ನಗರಕ್ಕೆ ನೀರು ಕೊಡುವ ಕೆಲಸದಲ್ಲಿ ಯಶಸ್ವಿಯಾಗಿದ್ದೇವೆ. ಎರಡನೇ ಹಂತದಲ್ಲಿ ನೀರು ಕೊಡುವ ಯೋಜನೆಗೆ ಈಗಾಗಲೇ ಶಂಕುಸ್ಥಾಪನೆಯಾಗಿದೆ. ಉಳಿದಂತೆ ರಸ್ತೆ, ಒಳಚರಂಡಿ, ಭೂಗತ ವಿದ್ಯುತ್ ಕೇಬಲ್ ಅಳವಡಿಕೆ, ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಲಾಗಿದೆ.ಜಗಳೂರು ಕ್ಷೇತ್ರದ ಗೊಂದಲವನ್ನು ಬಗೆಹರಿಸುವ ಪ್ರಯತ್ನ ನಡೆದಿದೆ. ಯಾರಿಗಾದರೂ ಸಮಾಧಾನ ಇರಬೇಕು. ನಮ್ಮದು ಸರ್ವರಿಗೂ ಸಮಾನ ಪ್ರಾತಿನಿಧ್ಯ ಕೊಡುವ ಪಕ್ಷ ಸಮಾಧಾನದಿಂದ ಇದ್ದರೆ ಎಲ್ಲೂವು ಸಿಗಲಿದೆ. ಈ ಸಂಬಂಧ ಪುಷ್ಪ ಬಂಡಾಯ ಅಭ್ಯರ್ಥಿ ಪುಷ್ಪ ಲಕ್ಷ್ಮಣಸ್ವಾಮಿ ಅವರು ಬಂದರೆ ಮಾತನಾಡುವುದಾಗಿ ತಿಳಿಸಿದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಫಲಿತಾಂಶವನ್ನು ಮೇ 15 ರಂದು ನೋಡಬೇಕು ಎಂದರು. 

ಈ ಸಂದರ್ಭದಲ್ಲಿ ಮೇಯರ್ ಅನಿತಾಬಾಯಿ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News