ನಮ್ಮ ಆಯ್ಕೆ ಸರಿಯಾಗಿರಲಿ

Update: 2018-04-23 18:36 GMT

ಮಾನ್ಯರೇ,

ನಾವು ನಮಗೆ ಬೇಕಾದ ವಸ್ತುಗಳನ್ನು ಖರೀದಿಸಬೇಕಾದರೆ ನೂರು ಬಾರಿ ಯೋಚನೆ ಮಾಡುತ್ತೇವೆ, ವಸ್ತು ಹೇಗಿದೆ, ಹೇಗೆ ಬಾಳಿಕೆ ಬರುತ್ತದೆ ಮತ್ತು ಎಷ್ಟು ದಿನ ಬಾಳುತ್ತದೆ ಎಂದು ಖರೀದಿಸುವ ಮುನ್ನ ಹೇಗೆ ನಾವು ನೂರು ಬಾರಿ ಯೋಚಿಸುತ್ತೇವೋ ಹಾಗೆಯೇ ನಮ್ಮನ್ನು ಪ್ರತಿನಿಧಿಸುವ ವ್ಯಕ್ತಿ ಹೇಗಿರಬೇಕು ಎಂದು ಸ್ವಲ್ಪಯೋಚಿಸಿ, ಸಮಾಜದಲ್ಲಿ ಅವನ ನಡತೆ, ಘನತೆ, ಗುಣಗಳು, ಅವನಿಗಿರುವ ಮನೋಭಾವಗಳನ್ನು ಅಳೆದು ನೋಡಿದಾಗ ಒಬ್ಬ ವ್ಯಕ್ಯಿಯ ನಿಜವಾದ ವ್ಯಕ್ತಿತ್ವ ಬಯಲಾಗುತ್ತದೆ. ಆಗ ನಮಗೆ ಸರಿ ಎನಿಸುವ ಮತ್ತು ಅಭಿವೃದ್ಧ್ದಿಯ ಕನಸನ್ನು ನನಸು ಮಾಡಲು ಪ್ರಯತ್ನಿಸುವ ವ್ಯಕ್ತಿಗೆ ಮತ ನೀಡಬಹುದು.
ಕ್ಷಣದ ಆಸೆ-ಆಮಿಷಗಳಿಗೆ ಬಲಿಯಾಗದೆ ರಾಜಕೀಯ ನಾಯಕರು ಕೊಡುವ ಹಣ, ಬಟ್ಟೆ, ಊಟ, ಗುಂಡುಪಾರ್ಟಿಗಳಿಗೆ ನಮ್ಮ ಅಮೂಲ್ಯವಾದ ಮತವನ್ನು ಮಾರಾಟ ಮಾಡಿಕೊಳ್ಳದೆ, ದೇಶದ ಅಭಿವೃದ್ಧಿಗೆ ಮತ್ತು ಸಮಾಜದ ಸುಧಾರಣೆಗೆ ಚಲಾಯಿಸಿ ನಮ್ಮ ಕನಸಿನ ಭಾರತ ನಿರ್ಮಿಸೋಣ.

Writer - -ಹೊನ್ನಪ್ಪ, ಶಾಖಾಪೂರು

contributor

Editor - -ಹೊನ್ನಪ್ಪ, ಶಾಖಾಪೂರು

contributor

Similar News