ಮಂಡ್ಯ: 5 ರೂ. ಡಾಕ್ಟರ್ ಖ್ಯಾತಿಯ ಶಂಕರೇಗೌಡ ಸೇರಿ 33 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Update: 2018-04-23 18:38 GMT

ಮಂಡ್ಯ, ಎ.23: ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್, ಕಾಂಗ್ರೆಸ್ ಧುರೀಣರು ಸೇರಿದಂತೆ ಸೋಮವಾರ 33 ಅಭ್ಯರ್ಥಿಗಳಿಂದ 50 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ನಿಂದ ಎಂ.ಶ್ರೀನಿವಾಸ್, ಪಕ್ಷೇತರ ಅಭ್ಯರ್ಥಿಗಳಾಗಿ ಡಾ.ಎಸ್.ಸಿ.ಶಂಕರೇಗೌಡ, ಎಸ್.ಜೆ.ಮಂಜುನಾಥ, ಎಂಇಪಿಯಿಂದ  ಎಂ.ಜೆ.ಕಾವೇರಿ ಶ್ರೇಯಾ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಬಿ.ಎಸ್.ಶಿವಕುಮಾರ್ ನಾಮಪತ್ರ ಸಲ್ಲಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸಿ.ಎಸ್.ಪುಟ್ಟರಾಜು, ಜನಸಾಮಾನ್ಯರ ಪಾರ್ಟಿ(ಕರ್ನಾಟಕ)ಯಿಂದ ಮಹೇಶ, ಪಕ್ಷೇತರರಾಗಿ ಅರುಣ್‍ಕುಮಾರ್, ಬಿ.ಕೆ.ಪುಟ್ಟರಾಜು ಹಾಗೂ ಎಐಎಂಇಪಿಯಿಂದ ಮಹೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ ಕೆ.ನಾರಾಯಣಗೌಡ, ಬಿಜೆಪಿಯ ಬಿ.ಸಿ.ಮಂಜು, ಪಕ್ಷೇತರ ಕುಮಾರ, ಶ್ರೀರಂಗಪಟ್ಟಣದಲ್ಲಿ ಬಿಜೆಪಿಯಿಂದ ಕೆ.ಎಸ್.ನಂಜುಂಡೇಗೌಡ, ಎಎಪಿಯಿಂದ ಸಿ.ಎಸ್.ವೆಂಕಟೇಶ್, ಪಕ್ಷೇತರರಾಗಿ ಕೆಂಪೇಗೌಡ ಉಮೇದುವಾರಿಕೆ ಸಲ್ಲಿಸಿದರು.

ನಾಗಮಂಗಲದಲ್ಲಿ ಈ ಮೊದಲೇ ನಾಮಪತ್ರ ಸಲ್ಲಿಸಿರುವ ಜೆಡಿಎಸ್ ಕೆ.ಸುರೇಶ್‍ಗೌಡ, ಬಿಜೆಪಿಯ ಡಾ.ಪಾರ್ಥಸಾರಥಿ, ಎಂಇಪಿಯಿಂದ ವಸೀಂ ಉಲ್ಲಾ ಖಾನ್, ಪಕ್ಷೇತರರಾಗಿ ಎನ್.ಎಸ್.ಅಶೋಕ ಹಾಗೂ ರುಕ್ಮಿಣಿ ನಾಮಪತ್ರ ಹಾಕಿದರು.

ಮದ್ದೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಎಂ.ಮಧು, ಹಿಂದೂಸ್ತಾನ್ ಜನತಾ ಪಾರ್ಟಿಯಿಂದ ಎಂ.ಪಿ.ಮುನವರ್ ಷರೀಫ್, ಎಂಇಪಿಯಿಂದ ಹೀನಾ ಕೌಸರ್, ಪಕ್ಷೇತರರಾಗಿ ಜಾವಿದ್ ಖಾನ್, ಮಳವಳ್ಳಿಯಲ್ಲಿ ಕಾಂಗ್ರೆಸ್‍ನಿಂದ ಎಂ.ಪಿ.ನರೇಂದ್ರಸ್ವಾಮಿ, ಜೆಡಿಎಸ್‍ನಿಂದ ಡಾ.ಕೆ.ಅನ್ನದಾನಿ, ಆರ್‍ಪಿಐನಿಂದ ಮಂಟೇಲಿಂಗು, ಇಂಡಿಯನ್ ನ್ಯೂ ಕಾಂಗ್ರೇಸ್ ಪಾರ್ಟಿಯಿಂದ ಎಂ.ಎಸ್.ಶಶಿಕುಮಾರ್ ಎಂಇಪಿಯಿಂದ ವಿಶ್ವನಾಥ್ ಜಿ.ಎಸ್. ನಾಮಪತ್ರ ಸಲ್ಲಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News