ಮತ್ತೆ ಸಂಕಷ್ಟಕ್ಕೆ ಸಿಲುಕಿದ ಮೂಡಿಗೆರೆ ಬಿಜೆಪಿ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ

Update: 2018-04-24 06:07 GMT

ಚಿಕ್ಕಮಗಳೂರು, ಎ.24: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದು, ಅವರ ವಿರುದ್ಧ ಮಹಿಳೆಯೊಬ್ಬರಿಗೆ ವಾಟ್ಸಾಪ್ ಮೂಲಕ ಅಶ್ಲೀಲ ಮೆಸೇಜ್, ವೀಡಿಯೋಗಳನ್ನು ಕಳುಹಿಸಿದ ಆರೋಪ ಕೇಳಿಬಂದಿದೆ.

ಎಂ.ಪಿ.ಕುಮಾರಸ್ವಾಮಿಯವರ ಮೊಬೈಲ್ ನಂಬರ್‌ನಿಂದ ಮಹಿಳೆಯೊಬ್ಬರಿಗೆ ಕಳುಹಿಸಿದ್ದೆನ್ನಲಾದ ವ್ಯಾಟ್ಸಾಪ್ ಮೆಸೇಜ್, ವೀಡಿಯೋಗಳ ಸ್ಕ್ರೀನ್‌ಶಾಟ್ ಎಲ್ಲೆಡೆ ವೈರಲ್ ಆಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ವೈರಲ್ ಮೆಸೇಜ್ ವಿರುದ್ಧ ಎಂ.ಪಿ.ಕುಮಾರಸ್ವಾಮಿಯವರು ಚಿಕ್ಕಮಗಳೂರು ಎಸ್ಪಿಅಣ್ಣಾಮಲೈ ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ನನ್ನ ಮೊಬೈಲ್ ನಂಬರನ್ನೊಳಗೊಂಡ ನಕಲಿ ಸ್ಕ್ರೀನ್ ಶಾಟ್ ಸೃಷ್ಟಿಸಿ ಮಾನಹಾನಿ ಮಾಡಲಾಗುತ್ತಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಹಿಂದೆಯೂ ಎಂ.ಪಿ.ಕುಮಾರಸ್ವಾಮಿ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿದ್ದೆನ್ನಲಾದ ಆಡಿಯೋ ಕ್ಲಿಪ್ಪಿಂಗ್ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಅವರ ವಿರುದ್ಧ ಆರೋಪ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News