ಭದ್ರಾ ಅಭಯಾರಣ್ಯದಲ್ಲಿ ಅನುಮಾನಾಸ್ಪದವಾಗಿ ಕಾಡಾನೆ ಸಾವು

Update: 2018-04-25 07:36 GMT

ಚಿಕ್ಕಮಗಳೂರು, ಎ.25: ಜಿಲ್ಲೆಯ ತಣಿಗೆಬೈಲು ಭದ್ರಾ ಅಭಯ್ಯಾರಣ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ.

ಹತ್ತು ವರ್ಷದ ಗಂಡಾನೆಯ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದ್ದು, ಕಳೇಬರದ ಮೇಲೆ ವಿದ್ಯುತ್ ತಂತಿ ಸ್ಪರ್ಶಕ್ಕೊಳಗಾದ ಗುರುತುಗಳಿವೆ ಎಂದು ಹೇಳಲಾಗುತ್ತಿದೆ.

ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಯೊಂದು ಓಡಾಡುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಆನೆ ಸಾವಿಗೀಡಾಗಿ ಹತ್ತು ದಿನಗಳು ಕಳೆದರೂ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ಇಲ್ಲದೆ ಇರುವುದು ಸ್ಥಳೀಯರ ಅನುಮಾನಕ್ಕೆ ಕಾರಣವಾಗಿದೆ.

ಸ್ಥಳಕ್ಕೆ ತಣಿಗೆಬೈಲು ವಲಯ ಅರಣ್ಯಾಧಿಕಾರಿ ಹಾಗೂ ಭದ್ರ ಹುಲಿ ಸಂರಕ್ಷಿತ ನಿದೇರ್ಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಎರಡು ದಂತಗಳನ್ನು ಅರಣ್ಯ ಸಿಬ್ಬಂದಿ ಬೇರ್ಪಡಿಸಿ ಕೊಂಡೊಯ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News