ಮಾದಕ ವಸ್ತು ಸಾಗಾಟ ಪ್ರಕರಣ: ಬಾಲಿವುಡ್ ನಟಿಯ ಆಸ್ತಿ ಮುಟ್ಟುಗೋಲಿಗೆ ಆದೇಶ

Update: 2018-04-26 17:14 GMT

ಥಾಣೆ, ಎ.26: 2016ರಲ್ಲಿ ಬೆಳಕಿಗೆ ಬಂದಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಎಫೆಡ್ರೈನ್ ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್‌ನ ನಟಿ ಮಮತಾ ಕುಲಕರ್ಣಿಗೆ ಸೇರಿದ ಮುಂಬೈಯಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಆದೇಶಿಸಿದೆ.

 ಮುಂಬೈಯ ವಿವಿಧೆಡೆ ಮಮತಾ ಕುಲಕರ್ಣಿಗೆ ಸೇರಿರುವ ಮೂರು ಅದ್ದೂರಿ ಫ್ಲಾಟ್‌ಗಳಿದ್ದು, ಇದರ ವೌಲ್ಯ ಸುಮಾರು 20 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 2016ರಲ್ಲಿ ಸೋಲಾಪುರ ಮೂಲದ ಔಷಧ ತಯಾರಿಕಾ ಸಂಸ್ಥೆಗೆ ದಾಳಿ ನಡೆಸಿದ್ದ ಪೊಲೀಸರು ಎಫೆಡ್ರೈನ್ ಸಾಗಾಟ ಜಾಲವನ್ನು ಬೇಧಿಸಿ, 14 ಮಂದಿಯನ್ನು ಬಂಧಿಸಿದ್ದರು. ಅಲ್ಲದೆ ಇನ್ನೂ ಐದು ಮಂದಿಯನ್ನು ಅಪೇಕ್ಷಿತ ಆರೋಪಿಗಳೆಂದು ಹೆಸರಿಸಲಾಗಿದ್ದು ಇವರಲ್ಲಿ ಮಮತಾ ಕುಲಕರ್ಣಿ ಕೂಡಾ ಸೇರಿದ್ದಾರೆ. ಆದರೆ ಮಮತಾ ಕುಲಕರ್ಣಿ ವಿದೇಶಕ್ಕೆ ತೆರಳಿದ್ದು ಇವರನ್ನು ಭಾರತಕ್ಕೆ ಕರೆತರಲು ಮಾಡಿದ್ದ ಪ್ರಯತ್ನ ವಿಫಲವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News