ಶೈಕ್ಷಣಿಕ ಸಾಲ ಸೌಲಭ್ಯ

Update: 2018-04-26 17:50 GMT

ಬೆಂಗಳೂರು, ಎ. 26: ಶಾಲಾ-ಕಾಲೇಜುಗಳಿಗೆ ಮಕ್ಕಳ ಪ್ರವೇಶ ಶುಲ್ಕ ಪಾವತಿಸಲು 50 ಸಾವಿರ ರೂ.ನಿಂದ 3 ಲಕ್ಷ ರೂ.ಗಳ ವರೆಗೆ ಅರ್ಲಿಸ್ಯಾಲರಿ ಮತ್ತು ಅವನ್ಸೆ ಸಂಸ್ಥೆ ಶೈಕ್ಷಣಿಕ ಸಾಲ ಸೌಲಭ್ಯಕ್ಕೆ ಮುಂದಾಗಿದ್ದು, ಮೂರರಿಂದ ಆರು ತಿಂಗಳ ಒಳಗೆ ಮರುಪಾವತಿಗೆ ಅವಕಾಶ ನೀಡುವುದಾಗಿ ಪ್ರಕಟಿಸಿದೆ.

ಶೈಕ್ಷಣಿಕ ಸಾಲ ಸೌಲಭ್ಯಕ್ಕಾಗಿ ಎರಡೂ ಸಂಸ್ಥೆಗಳು ‘ಫೀಸ್’ ಎಂಬ ಹೊಸ ಯೋಜನೆ ಜಾರಿಗೆ ತಂದಿದ್ದು, ಪೋಷಕರು ಇದರ ಸದಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಮಕ್ಕಳ ಶೈಕ್ಷಣಿಕ ಉನ್ನತಿಗೆ ಮುಂದಾಗಬೇಕು ಎಂದು ಸಂಸ್ಥೆ ಸಹ ಸಂಸ್ಥಾಪಕ ಅಕ್ಷಯ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News