ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ದ.ಕ ಪ್ರಥಮ,ಉಡುಪಿ ದ್ವಿತೀಯ

Update: 2018-04-30 12:52 GMT

ಬೆಂಗಳೂರು, ಎ.30: ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಒಟ್ಟು ಶೇ.59.56ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ, ಉಡುಪಿ 2 ನೇ ಸ್ಥಾನ ಹಾಗೂ ಕೊಡಗು ಜಿಲ್ಲೆ 3ನೇ ಸ್ಥಾನ ಪಡೆದಿದ್ದು, ಚಿಕ್ಕೋಡಿ ಜಿಲ್ಲೆ ಕೊನೆ ಸ್ಥಾನ ಗಳಿಸಿದೆ.

ಸೋಮವಾರ ಮಲ್ಲೇಶ್ವರಂನ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿ, ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ, ಮಾ. 1ರಿಂದ 17ರ ವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು 1,004 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. ಪರೀಕ್ಷೆಗೆ 6,85,713 ವಿದ್ಯಾರ್ಥಿಗಳು ಹಾಜರಾಗಿದ್ದರು. ಹೊಸಬರು 5,34,478 ಮಂದಿ ಹಾಜರಾಗಿದ್ದರು. ಇದರಲ್ಲಿ, 3,64,983 ಮಂದಿ ತೇರ್ಗಡೆಯಾಗಿದ್ದು, ಒಟ್ಟಾರೆ ಶೇ.68.29ರಷ್ಟು ಫಲಿತಾಂಶ ಬಂದಿದೆ ಎಂದರು.

ಪುನರಾವರ್ತಿತರು 1,22,807 ವಿದ್ಯಾರ್ಥಿಗಳು ಹಾಜರಾಗಿದ್ದರು. 36,108 ಮಂದಿ ತೇರ್ಗಡೆಯಾಗಿದ್ದು, ಒಟ್ಟಾರೆ ಶೇ.29.40ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಖಾಸಗಿಯಾಗಿ 28,428 ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಲ್ಲಿ 7,330 ಮಂದಿ ತೇರ್ಗಡೆಯಾಗಿದ್ದು, ಶೇ.25.78ರಷ್ಟು ಫಲಿತಾಂಶ ಬಂದಿದೆ. ಒಟ್ಟು 6,85,713 ವಿದ್ಯಾರ್ಥಿಗಳು ಹಾಜರಾಗಿದ್ದರು. 4,08,421 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.59.56ರಷ್ಟು ಫಲಿತಾಂಶ ಬಂದಿದೆ ಎಂದು ವಿವರಿಸಿದರು.

ಪ್ರಸ್ತುತ ಸಾಲಿನಲ್ಲಿ 3,49,592 ಮಂದಿ ಬಾಲಕರು ಹಾಜರಾಗಿದ್ದು, ಅದರಲ್ಲಿ 1,82,852 ಮಂದಿ ತೇರ್ಗಡೆಯಾಗಿದ್ದಾರೆ. ಶೇ.52.30ರಷ್ಟು ಫಲಿತಾಂಶ ಬಂದಿದೆ. 3,36,121 ಬಾಲಕಿಯರು ಹಾಜರಾಗಿದ್ದು, ಅದರಲ್ಲಿ 2,25,569 ಮಂದಿ ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದು, ಶೇ.67.11ರಷ್ಟು ಫಲಿತಾಂಶ ಬಂದಿದೆ. ಕನ್ನಡ ಮಾಧ್ಯಮದಲ್ಲಿ ಶೇ.51.46ರಷ್ಟು ಫಲಿತಾಂಶ ಬಂದಿದ್ದರೆ, ಇಂಗ್ಲಿಷ್ ಮಾಧ್ಯಮದಲ್ಲಿ ಶೇ.66.06ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗ- ಶೇ.45.13, ವಾಣಿಜ್ಯ ವಿಭಾಗ- ಶೇ.63.64, ವಿಜ್ಞಾನ ವಿಭಾಗ-ಶೇ.67.48ರಷ್ಟು ಫಲಿತಾಂಶ ಬಂದಿದೆ.

ಹೆಚ್ಚಿನ ಅಂಕ: ಶೇ.85ಕ್ಕಿಂತ ಹೆಚ್ಚು ಅಂಕವನ್ನು 54,692 ವಿದ್ಯಾರ್ಥಿಗಳು ಪಡೆದಿದ್ದಾರೆ. ಪ್ರಥಮ ದರ್ಜೆ- 2,13,611, ದ್ವಿತೀಯ ದರ್ಜೆ- 82,532, ತೃತೀಯ ದರ್ಜೆ- 57,586 ವಿದ್ಯಾರ್ಥಿಗಳು.

ಶೇ.100ರಷ್ಟು ಫಲಿತಾಂಶ: ಸರಕಾರಿ ಪದವಿ ಪೂರ್ವ ಕಾಲೇಜು 25, ಅನುದಾನ ರಹಿತ ಪ.ಪೂ.ಕಾಲೇಜು 41, ಅನಿದಾನಿತ ಪ.ಪೂ.ಕಾಲೇಜು 2. ಒಟ್ಟು 68 ಕಾಲೇಜುಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಇನ್ನು 3 ಸರಕಾರಿ ಕಾಲೇಜುಗಳು, 3 ಅನುದಾನಿತ ಕಾಲೇಜುಗಳು, 112 ಅನುದಾನ ರಹಿತ ಕಾಲೇಜುಗಳು ಸೇರಿ ಒಟ್ಟು 118 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ.

-ಸಿ.ಶಿಖಾ, ಪಿಯು ಮಂಡಳಿ ನಿರ್ದೇಶಕಿ

ಜಿಲ್ಲಾವಾರು ಶೇಕಡ ಫಲಿತಾಂಶ:
ದಕ್ಷಿಣ ಕನ್ನಡ-91.49, ಉಡುಪಿ-90.67, ಕೊಡಗು-83.94, ಉತ್ತರ ಕನ್ನಡ-76.75, ಶಿವಮೊಗ್ಗ-75.77, ಚಾಮರಾಜನಗರ- 75.30,ಚಿಕ್ಕಮಗಳೂರು-74.39, ಹಾಸನ-73.87, ಬೆಂಗಳೂರು ದಕ್ಷಿಣ-73.67, ಬಳ್ಳಾರಿ-73.04, ಬೆಂಗಳೂರು ಉತ್ತರ-71.68, ಬಾಗಲಕೋಟೆ-70.49, ಬೆಂಗಳೂರು ಗ್ರಾಮಾಂತರ-68.82, ಚಿಕ್ಕಬಳ್ಳಾಪುರ-68.61, ಹಾವೇರಿ-67.30, ಗದಗ-66.83, ಮೈಸೂರು-66.77, ಕೋಲಾರ-66.51, ಮಂಡ್ಯ-65.36, ರಾಮನಗರ-64.64, ತುಮಕೂರು-64.29, ಧಾರವಾಡ-63.67, ದಾವಣಗೆರೆ-63.29, ವಿಜಯಪುರ-63.10, ಕೊಪ್ಪಳ-63.04, ರಾಯಚೂರು- 56.22, ಚಿತ್ರದುರ್ಗ-56.06, ಯಾದಗಿರಿ-54.40, ಬೆಳಗಾವಿ-54.28, ಕಲಬುರಗಿ-53.61, ಬೀದರ್-52.63, ಚಿಕ್ಕೋಡಿ 52.20

ಗರಿಷ್ಠ ಅಂಕ ಪಡೆದವರು

ವಿಜ್ಞಾನ ವಿಭಾಗ

1.ಕೃತಿ ಮುಟ್ಟಗಿ -597: ಸರ್ದಾರ ಪಟೇಲ್ ಪಿ.ಯು ಕಾಲೇಜು ಬೆಂಗಳೂರು

2.ಅಂಕಿತಾ -595: ಗೋವಿಂದದಾಸ್ ಪಿ.ಯು ಕಾಲೇಜು ಸುರತ್ಕಲ್

2.ಎಸ್.ಎಲ್.ಮೋಹನ್ -595: ಮಾಸ್ಟರ್ಸ್ ಕಾಲೇಜು ಹಾಸನ

ವಾಣಿಜ್ಯ ವಿಭಾಗ

1.ವರ್ಷಿಣಿ ಎಂ.ಭಟ್ -595 : ಮಲ್ಲೇಶ್ವರಂ ವಿದ್ಯಾ ಮಂದಿರ, ಬೆಂಗಳೂರು

1.ಅಮೃತಾ -595: ರಾಜಾಜಿನಗರ ಎಎಸ್ ಸಿ ಕಾಲೇಜು

3.ಪೂರ್ವಿತಾ -594 : ಮೌಂಟ್ ಕಾರ್ಮೆಲ್  ಪಿಯು ಕಾಲೇಜು  ಬೆಂಗಳೂರು

ಕಲಾ ವಿಭಾಗ

1.ಸ್ವಾತಿ ಕೊಟ್ಟಪ್ಪ -595 : ಇಂದೂ ಪಿಯು ಕಾಲೇಜು ಬಳ್ಳಾರಿ

2.ರಮೇಶ್ -593 : ಇಂದೂ ಪಿಯು ಕಾಲೇಜು ಬಳ್ಳಾರಿ

3.ಗೊರವರ ಕಾವ್ಯಾಂಜಲಿ-588: ಇಂದೂ ಪಿಯು ಕಾಲೇಜು ಬಳ್ಳಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News