ಸಿರಿಯ: ಕ್ಷಿಪಣಿ ದಾಳಿಯಲ್ಲಿ 26 ಸರಕಾರಿ ಸೈನಿಕರ ಸಾವು

Update: 2018-04-30 18:24 GMT

ಬೈರೂತ್, ಎ. 30: ಉತ್ತರ ಸಿರಿಯದಲ್ಲಿ ನಡೆದ ಕ್ಷಿಪಣಿ ದಾಳಿಯೊಂದರಲ್ಲಿ 26 ಸರಕಾರ ಪರ ಬಾಡಿಗೆ ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಮೃತರ ಪೈಕಿ ಹೆಚ್ಚಿನವರು ಇರಾನಿಯನ್ನರು ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

ರವಿವಾರ ತಡ ರಾತ್ರಿ ನಡೆದ ದಾಳಿಯನ್ನು ಇಸ್ರೇಲ್ ನಡೆಸಿರುವಂತೆ ಕಂಡುಬರುತ್ತಿದೆ ಹಾಗೂ ನೆಲದಿಂದ ನೆಲಕ್ಕೆ ಹಾರುವ ಕ್ಷಿಪಣಿಗಳ ಗೋದಾಮನ್ನು ಗುರಿಯಾಗಿಸಲಾಗಿದೆ ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ವೀಕ್ಷಣಾಲಯ ಎಂದಿದೆ.

ಮೃತರಲ್ಲಿ ನಾಲ್ವರು ಸಿರಿಯನ್ನರೂ ಸೇರಿದ್ದಾರೆ.

ದಾಳಿಯಲ್ಲಿ 60 ಮಂದಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News