ಐರಿಶ್ ಪ್ರಧಾನಿ ‘ಥೇಟ್ ಭಾರತೀಯ’!

Update: 2018-05-02 17:15 GMT
ಜಾನ್ ಟೇಲರ್

ಲಂಡನ್, ಮೇ 2: ಶಿಷ್ಟಾಚಾರ ಅನುಸರಿಸದೆ ನಾರ್ದರ್ನ್ ಐರ್‌ಲ್ಯಾಂಡ್‌ಗೆ ಭೇಟಿ ನೀಡಿರುವ ಐರ್‌ಲ್ಯಾಂಡ್ ಪ್ರಧಾನಿ ಲಿಯೋ ವರಾಡ್ಕರ್ ‘ಥೇಟ್’ ಭಾರತೀಯ ಎಂಬುದಾಗಿ ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್ ಸದಸ್ಯ ಜಾನ್ ಟೇಲರ್ ಹೇಳಿದ್ದಾರೆ.

ಇದರ ಬೆನ್ನಿಗೇ, ಅವರ ಹೇಳಿಕೆಯು ಜನಾಂಗೀಯ ತಾರತಮ್ಯದ ಅಂಶಗಳನ್ನು ಒಳಗೊಂಡಿದೆ ಎಂಬ ಟೀಕೆ ವ್ಯಕ್ತವಾಗಿದೆ.

ನಾರ್ದರ್ನ್ ಐರ್‌ಲ್ಯಾಂಡ್ ಬ್ರಿಟನ್‌ಗೆ ಸೇರಿದ ಭಾಗವಾಗಿದೆ.

ವರಾಡ್ಕರ್ ಭಾರತೀಯ ತಂದೆ ಮತ್ತು ಐರಿಶ್ ತಾಯಿಗೆ ಹುಟ್ಟಿದವರಾಗಿದ್ದಾರೆ.

ನಾರ್ದರ್ನ್ ಐರ್‌ಲ್ಯಾಂಡ್‌ಗೆ ವರಾಡ್ಕರ್ ಸೋಮವಾರ ನೀಡಿದ ಭೇಟಿಯು ‘ಸಾಮಾನ್ಯ ಶಿಷ್ಟಾಚಾರ’ವನ್ನು ಒಳಗೊಂಡಿಲ್ಲ ಹಾಗೂ ಅವರ ವರ್ತನೆಯು ಕಳಪೆಯಾಗಿತ್ತು ಎಂಬುದಾಗಿ ಡೆಮಾಕ್ರಟಿಕ್ ಯೂನಿಯನಿಸ್ಟ್ ಪಾರ್ಟಿ ಸಂಸದ ಜೆಫ್ರಿ ಡೊನಾಲ್ಡ್‌ಸನ್ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿತ್ತು.

ಜಾನ್ ಟೇಲರ್ ಬಿಬಿಸಿ ವರದಿಗೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸುತ್ತಿದ್ದರು.

ಆದರೆ, ತನ್ನ ಪ್ರತಿಕ್ರಿಯೆಯು ಜನಾಂಗೀಯ ತಾರತಮ್ಯದಿಂದ ಕೂಡಿಲ್ಲ ಎಂಬುದಾಗಿ ಟೇಲರ್ ತಕ್ಷಣ ಹೇಳಿದ್ದಾರೆ.

‘‘ನಾನು ಖಂಡಿತವಾಗಿಯೂ ಜನಾಂಗೀಯವಾದಿಯಲ್ಲ. ವಾಸ್ತವವಾಗಿ ನಾನು ಭಾರತೀಯರ ಬಗ್ಗೆ ಮೆಚ್ಚುಗೆ ಹೊಂದಿದ್ದೇನೆ. ಇತರ ಐರ್‌ಲ್ಯಾಂಡ್ ಪ್ರಧಾನಿಗಳಿಗಿಂತ ಹೆಚ್ಚಾಗಿ ಈ ಪ್ರಧಾನಿ ಯೂನಿಯನಿಸ್ಟ್‌ಗಳನ್ನು ನಿರಾಶೆಗೊಳಿಸಿದ್ದಾರೆ ಎನ್ನುವುದಷ್ಟೇ ನನ್ನ ವಾದವಾಗಿದೆ’’ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News