ದಕ್ಷಿಣಕ್ಕೆ ವಿಮಾನಯಾನ: ವಿಶ್ವಸಂಸ್ಥೆ ಅನುಮತಿ ಕೋರಿದ ಉ. ಕೊರಿಯ

Update: 2018-05-05 17:33 GMT

ಮಾಂಟ್ರಿಯಲ್, ಮೇ 5: ದಕ್ಷಿಣ ಕೊರಿಯಕ್ಕೆ ವಾಯು ಮಾರ್ಗವೊಂದನ್ನು ಆರಂಭಿಸಲು ಉತ್ತರ ಕೊರಿಯವು ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಘಟನೆ (ಐಸಿಎಒ)ಯ ಅನುಮತಿ ಕೋರಿದೆ.

ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್ ಮತ್ತು ದಕ್ಷಿಣ ಕೊರಿಯದ ಸಿಯೋಲ್ ಸಮೀಪದ ಇಂಚಿಯನ್ ನಗರದ ನಡುವೆ ನೂತನ ವಾಯು ಸಂಚಾರ ಸೇವೆಗಳ ಕಾರಿಡಾರ್ ಸ್ಥಾಪಿಸುವ ಪ್ರಸ್ತಾಪವನ್ನು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿರುವ ಐಸಿಎಒದ ಪ್ರಾದೇಶಿಕ ಕಚೇರಿಗೆ ಫೆಬ್ರವರಿಯಲ್ಲಿ ಸಲ್ಲಿಸಲಾಗಿದೆ ಎಂದು ವಿಶ್ವಸಂಸ್ಥೆಯ ಘಟಕವಾಗಿರುವ ಐಸಿಎಒ, ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಈ ಪ್ರಸ್ತಾಪವನ್ನು ತಾನು ದಕ್ಷಿಣ ಕೊರಿಯದ ನಾಗರಿಕ ವಾಯುಯಾನ ಅಧಿಕಾರಿಗಳಿಗೆ ಕಳುಹಿಸಿರುವುದಾಗಿ ಎಂದು ಕೆನಡದ ಮಾಂಟ್ರಿಯಲ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಐಸಿಎಒ ಹೇಳಿದೆ.

‘‘ಪ್ರಸ್ತುತ ಈ ಮನವಿಯು ದಕ್ಷಿಣ ಕೊರಿಯದ ನಾಗರಿಕ ವಾಯುಯಾನ ಅಧಿಕಾರಿಗಳ ಪರಿಶೀಲನೆಯಲ್ಲಿದೆ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News