ಮುಸ್ಲಿಮರು ಮಸೀದಿಯೊಳಗಡೆ ನಮಾಝ್ ಮಾಡಲಿ: ಮನೋಹರ್ ಲಾಲ್ ಖಟ್ಟರ್

Update: 2018-05-06 09:07 GMT

ಹೊಸದಿಲ್ಲಿ, ಮೇ 6: ಗುರುಗ್ರಾಮದಲ್ಲಿ ಇತ್ತೀಚೆಗೆ ಕೇಸರಿ ಸಂಘಟನೆಗಳು ಮುಸ್ಲಿಮರ ನಮಾಝ್ ಗೆ ಅಡ್ಡಿಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಮುಸ್ಲಿಮರು ಮಸೀದಿಯೊಳಗಡೆ ಅಥವಾ ಈದ್ಗಾದಲ್ಲಿ ನಮಾಝ್ ಮಾಡಬೇಕು ಎಂದಿದ್ದಾರೆ.

“ಕಾನೂನು, ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಬಯಲಿನಲ್ಲಿ ನಮಾಝ್ ಮಾಡುವುದು ಇತ್ತೀಚೆಗೆ ನಡೆಯುತ್ತಿದೆ. ಸಾರ್ವಜನಿಕ ಸ್ಥಳಗಳ ಬದಲಾಗಿ ಮಸೀದಿಯೊಳಗೆ ಹಾಗು ಈದ್ಗಾದಲ್ಲಿ ನಮಾಝ್ ನಿರ್ವಹಸಬೇಕು” ಎಂದರು.

ಶುಕ್ರವಾರ ಗುರುಗ್ರಾಮ್ ನ ಹಲವೆಡೆ ಕೇಸರಿ ಸಂಘಟನೆಗಳು ನಮಾಝ್ ಗೆ ಅಡ್ಡಿಪಡಿಸಿತ್ತು. ಇಫ್ಕೋ ಚೌಕ್, ಉದ್ಯೋಗ್ ವಿಹಾರ್, ಲೀಶರ್ ವ್ಯಾಲಿ ಪಾರ್ಕ್ ಸೇರಿದಂತೆ ಹಲವೆಡೆ ನಮಾಝ್ ಗೆ ಅಡ್ಡಿಪಡಿಸಲಾಗಿದ್ದು, “ಜೈ ಶ್ರೀ ರಾಮ್”, “ಬಾಂಗ್ಲಾದೇಶ್ ವಾಪಸ್ ಜಾವೋ” ಘೋಷಣೆಗಳನ್ನು ಕೂಗಿದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News