ಪ್ರಧಾನಿ ಮೋದಿ ನಡೆ ದೇಶಕ್ಕೆ ಒಳ್ಳೆಯದಲ್ಲ: ಮನಮೋಹನ್ ಸಿಂಗ್

Update: 2018-05-07 09:30 GMT

ಬೆಂಗಳೂರು, ಮೇ 7: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟದಲ್ಲಿ ಕೈಗೊಂಡಿದ್ದ ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಅವರ ಭಾಷಾ ಬಳಕೆ ಕೆಟ್ಟದ್ದಾಗಿತ್ತು. ಪ್ರಧಾನಿ ಮೋದಿ ನಡೆ ದೇಶಕ್ಕೆ ಒಳ್ಳೆಯದಲ್ಲ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಉನ್ನತ ಸ್ಥಾನದಲ್ಲಿರುವವರು ಈ ರೀತಿ ಮಾಡಬಾರದು. ಯಾವುದೇ ಪ್ರಧಾನಿ ಮೋದಿಯಷ್ಟು  ಕೆಳಮಟ್ಟಕ್ಕೆ ಇಳಿದಿರಲಿಲ್ಲ ಎಂದು ಮನ್ ಮೋಹನ್ ಸಿಂಗ್ ಅಭಿಪ್ರಾಯಪಟ್ಟರು.

ಪ್ರಧಾನಿ ಮಾತನಾಡುವ ವೇಳೆ ಒಳ್ಳೆಯ ಭಾಷೆ ಬಳಕೆ ಮಾಡಬೇಕು. ಅತ್ಯುನ್ನತ ಸ್ಥಾನದಲ್ಲಿದ್ದುಕೊಂಡು ಮೋದಿ ಈ ರೀತಿ ಮಾಡಬಾರದಿತ್ತು. ಎದುರಾಳಿಗಳನ್ನು ಮಣಿಸಲು ಪ್ರಧಾನಿ ಕಚೇರಿಯ ದುರ್ಬಳಕೆ ಮಾಡಲಾಗುತ್ತದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News