ರಾಜ್ಯದಲ್ಲಿ ಮತದಾನ ಪ್ರಗತಿಯಲ್ಲಿ , ಬೆಳಗ್ಗೆ 9:15ರ ಹೊತ್ತಿಗೆ ಶೇ 10.60ರಷ್ಟು ಮತದಾನ

Update: 2018-05-12 07:17 GMT

ಬೆಂಗಳೂರು, ಮೇ 12:  ಕರ್ನಾಟಕ ರಾಜ್ಯ ವಿಧಾನಸಭೆಯ   222 ಕ್ಷೇತ್ರಗಳಿಗೆ ಮತದಾನ ಶನಿವಾರ ಬೆಳಗ್ಗೆ ಆರಂಭಗೊಂಡಿದ್ದು,  ಬೆಳಗ್ಗೆ 9:15ರ ಹೊತ್ತಿಗೆ ಶೇ 10:60ರಷ್ಟು ಮತದಾನವಾಗಿದೆ.

ಒಟ್ಟು 5.06 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಒಟ್ಟು 224  ಕ್ಷೇತ್ರಗಳ  222 ಕ್ಷೇತ್ರಗಳಲ್ಲಿ  ಮತದಾನ ನಡೆಯುತ್ತಿದೆ. ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ 28ಕ್ಕೆ ನಡೆಯಲಿದೆ, ಜಯನಗರ ಕ್ಷೇತ್ರದಲ್ಲಿ ಅಭ್ಯರ್ಥಿ ಸಾವಿನ ಹಿನ್ನೆಲೆಯಲ್ಲಿ ಚುನಾವಣೆಯನ್ನು ಶುಕ್ರವಾರ  ಮುಂದೂಡಲಾಗಿತ್ತು.
ಮತದಾನದ ಹೈಲೈಟ್ಸ್
*ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೊಳೆನರಸೀಪುರ ಕ್ಷೇತ್ರದ ಪಡುವಲಹಿಪ್ಪೆ ಗ್ರಾಮದಲ್ಲಿ ಪತ್ನಿ ಚನ್ನಮ್ಮ,ಪುತ್ರ ರೇವಣ್ಣ ಕುಟುಂಬದೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ.ಮಾಡಿದರು.

*ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ, ಲಾರೆನ್ಸ್ ಇಂಗ್ಲಿಷ್ ಸ್ಕೂಲ್, 9ನೇ ಮುಖ್ಯ ರಸ್ತೆ, ಎಚ್ ಎಸ್ ಆರ್ ಲೇಔಟ್‌ನಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

*ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ  ಮತದಾನ ಮಾಡಿದರು. ಮತದಾನಕ್ಕೂ ಮುನ್ನ ಅವರು    ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

*ವಿಜಯಪುರದಲ್ಲಿ ಸಚಿವ ಎಂ.ಬಿ.ಪಾಟೀಲ ಹಾಗೂ ಅವರ ಪತ್ನಿ ಮತದಾನ ಮಾಡಿದರು.

*ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಕೃಷ್ಣದತ್ತ ಒಡೆಯರ್ ಮೊದಲ ಬಾರಿ ತಮ್ಮ ಹಕ್ಕು ಚಲಾಯಿಸಿದರು.

ಜಿಟಿ ದೇವೇಗೌಡ ಅವರು ಮೈಸೂರು ತಾಲೂಕಿನ ತಮ್ಮ ಸ್ವಕ್ಷೇತ್ರದಲ್ಲಿ  ಕುಟುಂಬ ಸಮೇತರಾಗಿ ಮತ ಚಲಾಯಿಸಿದರು.

*ಚಿತ್ರ ನಟ ರಮೇಶ್‌   ಪುತ್ರಿ ಜೊತೆ  ಮತದಾನ ಮಾಡಿದರು.

*ಕೇಂದ್ರ ಸಚಿವ ಸದಾನಂದ ಗೌಡ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.


*ಮೊಳಕಾಲ್ಮುರು ಮತ್ತು ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಬಿ.ಶ್ರೀರಾಮುಲು ಬಳ್ಳಾರಿಯಲ್ಲಿ ಮತದಾನಕ್ಕೆ ಮುನ್ನ ಗೋಪೂಜೆ ಸಲ್ಲಿಸಿದರು.


*ಶಾಂತಿನಗರದ ಶಾಸಕ ಎನ್ ಎ ಹಾರೀಸ್ ಕುಟುಂಬದ ಸದಸ್ಯರೊಂದಿಗೆ ಮತದಾನ ಮತ ಚಲಾಯಿಸಿದರು.


*ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು  ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿ ಅವರನ್ನು ಇಂದು ಬೆಳಗ್ಗೆ ಭೇಟಿಯಾಗಿ ಆಶೀರ್ವಾದ ಪಡೆದರು. 

*ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ರಾಮನಗರದಲ್ಲಿ ಮತ ಚಲಾಯಿಸಿದರು.


*ಟೀಮ್ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಬೆಂಗಳೂರಿನಲ್ಲಿ ಮತದಾನ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ ಚಲಾವಣೆ ಮಾಡಿದರು.​

* ಬಿಜೆಪಿ ಮಲ್ಲೇಶ್ವರ ಕ್ಷೇತ್ರದ ಅಭ್ಯರ್ಥಿ ಡಾ.ಅಶ್ವಥ್ ನಾರಾಯಣ,  ಪತ್ನಿ ಮತ ಚಲಾವಣೆ.

*ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯ ಬಸವನಗರ  ಮತಗಟ್ಟೆ 108ರಲ್ಲಿ  ಮತ ಚಲಾಯಿಸಿದರು.

*ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಬಗ್ಗೆ  ನಮಗೆ ವಿಶ್ವಾಸವಿದೆ. ಬಿಜೆಪಿ  150 ಸ್ಥಾನ ಪಡೆಯುವುದನ್ನು ಮರೆತುಬಿಡಿ. ಬಿಜೆಪಿ ಗರಿಷ್ಠ 60ರಿಂದ 70ರ ತನಕ ಸ್ಥಾನ ಗೆಲ್ಲಬಹುದು. ಬಿಜೆಪಿ ನಾಯಕರು ಸರಕಾರ ರಚನೆಯ ಕನಸು ಕಾಣುತ್ತಿದ್ದಾರೆ -ಮಲ್ಲಿಕಾರ್ಜುನ ಖರ್ಗೆ , ಲೋಕಸಭೆಯ ಕಾಂಗ್ರೆಸ್  ನಾಯಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News