ಹನೂರು: ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ ಜೆಡಿಎಸ್ ಕಾರ್ಯಕರ್ತರು

Update: 2018-05-20 10:54 GMT

ಹನೂರು,ಮೇ.20: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಹಾಗೂ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಮಾಹಿತಿ ಖಚಿತವಾದ ಬೆನ್ನಲ್ಲೇ ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ಎಮ್.ಆರ್ ಮಂಜುನಾಥ್ ತಮ್ಮ ನೂರಾರು ಅಭಿಮಾನಿಗಳ ಜೊತೆಗೂಡಿ ಸಿಹಿ ಹಂಚುವುದರ ಮುಖಾಂತರ ಸಂಭ್ರಮಾಚರಣೆ ನಡೆಸಿದರು.

ಪಿ.ಜಿ ಪಾಳ್ಯ ಸಮೀಪದ ಹೂಸದೂಡ್ಡಿ ಗ್ರಾಮದ ಮಾರಮ್ಮನ ದೇವಸ್ಥಾನದ ಬಳಿ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೂಂಡ ಬಿ.ಎಸ್ ಯಡಿಯೂರಪ್ಪ ವಿಶ್ವಾಸಮತಯಾಚನೆ ಮಾಡದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ, ಕೇಕ್ ಕತ್ತರಿಸಿ ಗ್ರಾಮಸ್ಥರಿಗೆ ಸಿಹಿ ಹಂಚಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪರಾಜಿತ ಜೆಡಿಎಸ್ ಅಭ್ಯರ್ಥಿ ಎಮ್.ಆರ್  ಮಂಜುನಾಥ್, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ನಾಡಿನ ಹಿಂದುಳಿದವರ, ಬಡವರ, ರೈತರ ದೀನ ದಲಿತರ ಪರ ನಿಂತು ಆಡಳಿತ ನಡೆಸಲಿದ್ದು, ಅವರ ಆಡಳಿತ ವೈಖರಿಯಿಂದ ರಾಜ್ಯವು ದೇಶದಲ್ಲಿಯೇ ಮಾದರಿ ರಾಜ್ಯವಾಗಲಿದೆ. ಹನೂರು ಕ್ಷೇತ್ರದ ಜನತೆ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನನಗೆ ಸುಮಾರು 45 ಸಾವಿರ ಮತಗಳನ್ನು ನೀಡಿದ್ದಾರೆ. ನಾನು ನಿಮಗೆ ಅಭಾರಿಯಾಗಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲು ಜವಾಬ್ದಾರಿ ತೆಗೆದುಕೂಂಡು, ಕ್ಷೇತ್ರದ ಜನರ ಜೊತೆಗೆ ಸದಾ ಇದ್ದು, ಇಲ್ಲಿನ ಸರ್ವಜನರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು 

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಾಮರಾಜು, ಪಿ.ಜಿ.ಪಾಳ್ಯ ಗ್ರಾಪಂ ಸದಸ್ಯ ಕೃಷ್ಣ, ಹನೂರು ರಾಜೇಶ್, ಮಹೇಶ್, ಶೇಖರ್ ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News