ರಾಜ್ ನಾಥ್ ಸಿಂಗ್ ಹೆಲಿಕಾಪ್ಟರ್ ಗಾಗಿ 12 ಗಂಟೆಗಳ ಕಾಲ 20 ಗ್ರಾಮಗಳ ವಿದ್ಯುತ್ ಸ್ಥಗಿತ!

Update: 2018-05-20 11:38 GMT

ಭೋಪಾಲ್, ಮೇ 20: ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಗಾಗಿ ಸ್ಥಳೀಯಾಡಳಿತವು ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ 20 ಗ್ರಾಮಗಳ ವಿದ್ಯುತ್ ಸಂಪರ್ಕವನ್ನು 12 ಗಂಟೆಗಳ ಕಾಲ ಸ್ಥಗಿತಗೊಳಿಸಿರುವ ಬಗ್ಗೆ ವರದಿಯಾಗಿದೆ.

ಮೇ 19ರ ಸಂಜೆ 4 ಗಂಟೆಯಿಂದ ಮೇ 20ರ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಸ್ಥಳೀಯ ಪತ್ರಿಯೊಂದರಲ್ಲಿ ಪ್ರಕಟನೆ ನೀಡಲಾಗಿತ್ತು. ಈ ಪ್ರದೇಶದಲ್ಲಿ 2 ಹೈವೋಲ್ಟೇಜ್ ವಿದ್ಯುತ್ ಲೈನ್ ಗಳು ಹಾದು ಹೋಗುವುದರಿಂದ ಸುರಕ್ಷಿತ ಹೆಲಿಕಾಪ್ಟರ್ ಲ್ಯಾಂಡಿಂಗ್ ಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

ಇದನ್ನು ವಿರೋಧಿಸಿ ಸ್ಥಳೀಯರು ವಿದ್ಯುತ್ ಸರಬರಾಜು ಕಚೇರಿಯೆದುರು ಪ್ರತಿಭಟನೆ ನಡೆಸಿದ ನಂತರ ಇಂದು ಮುಂಜಾನೆ 3 ಗಂಟೆಗೆ ವಿದ್ಯುತ್ ಸರಬರಾಜು ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಸಾತ್ನಾ ತಲುಪಲು ಗೃಹಸಚಿವರು ಬೇರೆಯದೇ ದಾರಿಯಲ್ಲಿ ಆಗಮಿಸಲಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News