ಮೇ 26, 27ರಂದು ಧಾರವಾಡದಲ್ಲಿ ಮೇ ಸಾಹಿತ್ಯ ಮೇಳ

Update: 2018-05-21 16:32 GMT

ಬೆಂಗಳೂರು, ಮೇ 21: ಧಾರವಾಡದಲ್ಲಿ ಮೇ ಸಾಹಿತ್ಯ ಮೇಳವು ಮೇ 26 ಮತ್ತು 27ರಂದು ಮೇ ಸಾಹಿತ್ಯ ಮೇಳವು ಬಹುತ್ವ ಭಾರತ: ಇಂದು, ನಾಳೆ ಎಂಬ ವಿಷಯ ಕುರಿತು ಸಂವಾದ-ಸಮಾವೇಶ ನಡೆಯಲಿದ್ದು, ಮೇಳದಲ್ಲಿ ಹೋರಾಟಗಾರರು, ಸಾಹಿತಿಗಳು ಹಾೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಲಡಾಯಿ ಪ್ರಕಾಶನ, ಚಿತ್ತಾರ ಕಲಾ ಬಳಗ, ಧಾರವಾಡ ಸಂಘಟನೆಗಳ ಆಶ್ರಯದಲ್ಲಿ ಈ ಮೇ ಸಾಹಿತ್ಯ ಮೇಳವನ್ನು ಆಯೋಜಿಸಿದ್ದು, ಈ ಮೇಳದ ಉದ್ಘಾಟನೆಯನ್ನು ಮೇ 26ರಂದು ತೆಲಂಗಾಣದ ಪ್ರಸಿದ್ಧ ಸ್ತ್ರೀವಾದಿ ಲೇಖಕಿ ಹೈದ್ರಾಬಾದಿನ ಓಲ್ಗಾ ಉದ್ಘಾಟನೆ ಮಾಡಲಿದ್ದಾರೆ. ನಟ, ಲೇಖಕ ಪ್ರಕಾಶ್ ರೈ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಮಾಡಲಿದ್ದಾರೆ.

ಪ್ರಶಸ್ತಿ ಪ್ರದಾನ ಮತ್ತು ಸಮಾರೋಪದ ಭಾಷಣವನ್ನು ಪ್ರೊ.ಚಂದ್ರಶೇಖರ್ ಪಾಟಿಲ್ ಮಾಡಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ಡಾ.ಕಾಳೇಗೌಡ ನಾಗವಾರ ಮಾಡಲಿದ್ದಾರೆ. ಕೆ.ನೀಲಾ ಅವರು ಬಂಡ್ರಿ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಮೊದಲ ಗೋಷ್ಠಿಯಲ್ಲಿ ಮಾಜಿ ಅಡ್ವೋಕೇಟ್ ಜರನಲ್ ಪ್ರೊ.ರವಿವರ್ಮ್‌ಕುಮಾರ್ ಅವರು ಸಂಧಾನ: ಬದಲಾವಣೆ ಹುನ್ನಾರ ಮತ್ತು ಜಾತಿ ಪ್ರಜ್ಞೆ ಕುರಿತು ವಿಷಯ ಮಂಡಿಸಲಿದ್ದಾರೆ. ಕಾರ್ಯಕ್ರಮವು ಮೇ 26 ಮತ್ತು 27ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಭವನದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News