ತಮಿಳುನಾಡು; ವೇದಾಂತ ಕಂಪೆನಿ ವಿರುದ್ಧ ಪ್ರತಿಭಟನೆ: ಪೊಲೀಸರ ಗೋಲಿಬಾರ್‌ಗೆ 11 ಸಾವು

Update: 2018-05-22 18:31 GMT

► ಮೃತಪಟ್ಟವರಲ್ಲಿ 16 ವರ್ಷದ ಬಾಲಕಿ

► 100 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ - 20,000 ಪ್ರತಿಭಟನಕಾರರು ಭಾಗಿ

► ಹಲವು ಪೊಲೀಸ್ ವಾಹನಗಳಿಗೆ ಹಾನಿ

► ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

ತೂತುಕುಡಿ, ಮೇ 22: ತಮಿಳುನಾಡಿನ ತೂತುಕುಡಿಯಲ್ಲಿರುವ ತಾಮ್ರ ಮಿಶ್ರಣ ಘಟಕ ಸ್ಟರ್ಲೈಟ್ ಮುಚ್ಚುವಂತೆ ಆಗ್ರಹಿಸಿ ಕಳೆದ 100 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಮಂಗಳವಾರ ಹಿಂಸಾರೂಪಕ್ಕೆ ತಿರುಗಿತು. ಈ ಸಂದರ್ಭ ಪೊಲೀಸರು ಪ್ರತಿಭಟನಕಾರರ ಮೇಲೆ ನಡೆಸಿದ ಗೋಲಿಬಾರ್‌ನಲ್ಲಿ 16 ವರ್ಷದ ಬಾಲಕಿ ಸೇರಿದಂತೆ 30 ಮಂದಿ ಮೃತಪಟ್ಟಿದ್ದಾರೆ ಹಾಗೂ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ತೂತುಕುಡಿಯಲ್ಲಿ ಪೊಲೀಸ್ ಕಾರ್ಯಾಚರಣೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ದೃಢಪಡಿಸಿದ್ದಾರೆ. ಎಲ್ಲ 10 ಮೃತದೇಹಗಳನ್ನು ತೂತುಕುಡಿ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತರಲಾಗಿದೆ.

ಸ್ಟರ್ಲೈಟ್ ಘಟಕ ಖಾಯಂ ಮುಚ್ಚುವಂತೆ ಹಾಗೂ ಹಿಂಸಾಚಾರವನ್ನು ನಿಲ್ಲಿಸುವಂತೆ ಆಗ್ರಹಿಸಿ 20,000ಕ್ಕೂ ಅಧಿಕ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಮ್ರ ಘಟಕಕ್ಕೆ ರ್ಯಾಲಿ ನಡೆಸಿದರು. ಇದಕ್ಕೆ ಪೊಲೀಸರು ತಡೆ ಒಡ್ಡಿದರು. ಇದರಿಂದ ಆಕ್ರೋಶಿತರಾದ ಪ್ರತಿಭಟನಕಾರರು ಕಲ್ಲುಗಳನ್ನು ಎಸೆದರು ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಅನಂತರವೂ ಪ್ರತಿಭಟನಕಾರರು ಸ್ಟರ್ಲೈಟ್ ಘಟಕ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ರ್ಯಾಲಿ ನಡೆಸಲು ಪ್ರಯತ್ನಿಸಿದರು ಹಾಗೂ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸ್ ಅಧಿಕಾರಿಗಳು ಲಾಠಿ ಚಾರ್ಜ್ ನಡೆಸಿದರು ಹಾಗೂ ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದರು. ಹಿಂಸಾಚಾರ ಕೈಮೀರಿ ಹೋಗುತ್ತಿದ್ದಂತೆ ಪೊಲೀಸರು ಗೋಲಿಬಾರ್ ನಡೆಸಿದರು. ಇದರಿಂದ 11 ಮಂದಿ ಮೃತಪಟ್ಟರು ಹಾಗೂ 50 ಮಂದಿ ಗಾಯಗೊಂಡರು.

ಆಕ್ರೋಶಿತರಾದ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಯ ಎದುರು ನಿಲ್ಲಿಸಲಾಗಿದ್ದ ಕೆಲವು ವಾಹನಗಳನ್ನು ದಹಿಸಿದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಪೊಲೀಸರು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಂಡರು. ತೂತುಕುಡಿಯನ್ನು ಹಿಂಸಾಚಾರ ನಿಯಂತ್ರಣಕ್ಕೆ ತರಲು ನೆರೆಯ ಜಿಲ್ಲೆಗಳಿಂದ 2 ಸಾವಿರ ಪೊಲೀಸ್ ಸಿಬ್ಬಂದಿ ತೂತುಕುಡಿಗೆ ಆಗಮಿಸಿದರು.

ಪರಿಹಾರ ಘೋಷಣೆ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ಧನ ಹಾಗೂ ಸರಕಾರಿ ಉದ್ಯೋಗವನ್ನು ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಿಸಿದ್ದಾರೆ. ಅದೇ ರೀತಿ ಗಾಯಗೊಂಡವರಿಗೆ 3 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ. 

ಸರಕಾರ ಜನರ ಭಾವನೆಗಳಿಗೆ ಗೌರವ ನೀಡುತ್ತಿಲ್ಲ. ಈ ಅಮಾಯಕರ ಸಾವಿಗೆ ಸರಕಾರ ಹೊಣೆ ರಜನಿಕಾಂತ್, ಚಿತ್ರ ನಟ

ಸ್ಟರ್ಲೈಟ್ ವಿರುದ್ಧ ತೂತುಕುಡಿಯಲ್ಲಿ ಶಾಂತಿಯುತವಾಗಿ ನಡೆದ ಪ್ರತಿಭಟನೆಯನ್ನು ಸರಕಾರ ನಿರ್ಲಕ್ಷಿಸಿತು. ಸರಕಾರದ ನಿರ್ಲಕ್ಷ ಈ ಸಾವಿಗೆ ಕಾರಣ. ನಾಗರಿಕರು ಅಪರಾಧಿಗಳಲ್ಲ.

ಕಮಲ್ ಹಾಸನ್, ಮಕ್ಕಳ್ ನೀಧಿ ಮೆಯ್ಯಮ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News