ಸಿಇಟಿ, ನೀಟ್ ಪರೀಕ್ಷೆ: ಅಲ್ಪಸಂಖ್ಯಾತರಿಗೆ ಸಾಲ ಸೌಲಭ್ಯ

Update: 2018-05-22 17:49 GMT

ಉಡುಪಿ ಮೇ 22: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ ಇದರ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಸಿಖ್, ಆಂಗ್ಲೋ ಇಂಡಿಯನ್ ಹಾಗೂ ಪಾರ್ಸಿ ಜನಾಂಗದ ವಿದ್ಯಾರ್ಥಿಗಳು 2018-19ನೇ ಸಾಲಿನ ಸಿ.ಇ.ಟಿ/ನೀಟ್ ಪರೀಕ್ಷೆಗೆ ಹಾಜರಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣವಾದ ವೈದ್ಯಕೀಯ, ಇಂಜಿನಿಯರಿಂಗ್, ದಂತ ವೈದ್ಯಕೀಯ, ಬಿ.ಟೆಕ್, ಬಿ.ಪಾರ್ಮ, ಡಿ.ಪಾರ್ಮ, ಬಿ.ಎ.ಎಂ.ಎಸ್, ಬಿ.ಯು.ಎಂ.ಎಸ್ ಮುಂತಾದ ಸ್ನಾತಕೋತ್ತರ ಪದವಿಗಳಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಳ್ಳಲು ನಿಗಮದಿಂದ ವಾರ್ಷಿಕ ಗರಿಷ್ಟ 75,000ರೂ. ಶೇ.2ರ ಸೇವಾ ಶುಲ್ಕದ ಆಧಾರದ ಮೇಲೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ.

ಈ ಸಂಬಂಧ 2018-19ನೇ ವರ್ಷದ ವೈದ್ಯಕೀಯ, ಇಂಜಿನಿಯರಿಂಗ್, ದಂತ ವೈದ್ಯಕೀಯ, ಬಿ.ಟೆಕ್, ಬಿ.ಪಾರ್ಮ, ಡಿ.ಪಾರ್ಮ, ಬಿ.ಎ.ಎಂ.ಎಸ್, ಬಿ.ಯು.ಎಂ.ಎಸ್ ಮುಂತಾದ ಸ್ನಾತಕೋತ್ತರ ಪದವಿಗಳಿಗೆ ಸೇರ ಬಯಸುವ ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರ್ಜಿಗಳನ್ನು ಆನ್‌ಲೆನ್ ಮೂಲಕ ಸಲ್ಲಿಸಲು ತಿಳಿಸಲಾಗಿದೆ.
ನಿಗಮದ ವೆಬ್‌ಸೈಟ್ -kmdc.kar.nic.in/arivu2- ಲಿಂಕನ್ನು ತೆರೆದು ಅರ್ಜಿಯನ್ನು ತುಂಬಿ ಕಂಪ್ಯೂಟರ್ ಮೂಲಕ ಭರ್ತಿ ಮಾಡಿದ ಕೂಡಲೇ ಅಂತಹ ವಿದ್ಯಾರ್ಥಿಗಳು ಅರ್ಜಿಯ ಪ್ರಿಂಟ್‌ಔಟ್‌ನ್ನು ತೆಗೆದುಕೊಂಡು ಕೋಡಿನೊಂದಿಗೆ ಇತರೆ ದಾಖಲಾತಿಗಳೊಂದಿಗೆ ನೇರವಾಗಿ ಜಿಲ್ಲಾ ಕಛೇರಿಗೆ ಸಲ್ಲಿಸಬೇಕು. ಅಂತಹ ವಿದ್ಯಾರ್ಥಿಗಳು ಭರಿಸಬೇಕಾದ ಬೋದನಾ ಶುಲ್ಕಕ್ಕಾಗಿ ನಿಗಮದಿಂದ ಮಂಜೂರು ಮಾಡುವ ಸಾಲವನ್ನು ಅವರು ವ್ಯಾಸಂಗ ಮಾಡುವ ಕಾಲೇಜಿಗೆ ನೇರವಾಗಿ ಪಾವತಿ ಮಾಡಲಾಗುವುದು. ಜೂ.9 ದಾಖಲಾತಿ ಯೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574990 ಗೆ ಸಂಪರ್ಕಿಸುವಂತೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಉಡುಪಿ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News