ಭಾರತದ ಮೊದಲ 14 ಲೇನ್ ಹೆದ್ದಾರಿ ಉದ್ಘಾಟಿಸಿದ ಪ್ರಧಾನಿ ಮೋದಿ

Update: 2018-05-27 06:08 GMT

ಹೊಸದಿಲ್ಲಿ, ಮೇ 27: ದಿಲ್ಲಿ-ಮೀರತ್ ಎಕ್ಸ್ ಪ್ರೆಸ್ ವೇಯ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಎರಡು ನಗರಗಳ ನಡುವಿನ ಎರಡೂವರೆ ಗಂಟೆಗಳ ಪ್ರಯಾಣ ಸಮಯದಲ್ಲಿ 40 ನಿಮಿಷಗಳು ಈ ಎಕ್ಸ್ ಪ್ರೆಸ್ ವೇ ಮೂಲಕ ಕಡಿತಗೊಳ್ಳಲಿದೆ ಎನ್ನಲಾಗಿದೆ.

7500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ದಿಲ್ಲಿ ಮೀರತ್ ಎಕ್ಸ್ ಪ್ರೆಸ್ ವೇಯ 14ನೆ ಲೇನ್ ನಲ್ಲಿ ಪ್ರಧಾನಿ ಮೋದಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ತೆರೆದ ಜೀಪಿನಲ್ಲಿ ಸಾಗಿದರು.

ದಿಲ್ಲಿ ಮೀರತ್ ಎಕ್ಸ್ ಪ್ರೆಸ್ ವೇ ಭಾರತದ ಮೊದಲ 14 ಲೇನ್ ಹೆದ್ದಾರಿಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಇದನ್ನು “ಮಾಲಿನ್ಯದಿಂದ ಮುಕ್ತ ದಾರಿ” ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News