ಮಾಲ್ವೇರ್ ದಾಳಿಯ ಹಿಂದೆ ಉತ್ತರ ಕೊರಿಯ: ಅಮೆರಿಕ ಆರೋಪ

Update: 2018-05-30 19:21 GMT

ವಾಶಿಂಗ್ಟನ್, ಮೇ 30: ಕಳೆದ ಒಂಬತ್ತು ವರ್ಷಗಳಿಂದ ಉತ್ತರ ಕೊರಿಯ ಸರಕಾರಕ್ಕೆ ಸೇರಿದ ಮಾಲ್ವೇರ್‌ಗಳು ಅಮೆರಿಕದ ವೈಮಾನಿಕ, ಆರ್ಥಿಕ ಮತ್ತು ಮಾಧ್ಯಮಗಳ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ದಾಳಿ ನಡೆಸಿ ಮಾಹಿತಿಗಳನ್ನು ಕಳವು ಮಾಡುತ್ತಿವೆ ಮತ್ತು ಅಂತರ್ಜಾಲ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಮೆರಿಕನ್ ಅಧಿಕಾರಿಗಳು ಆರೋಪಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಉತ್ತರ ಕೊರಿಯ ತನ್ನ ವಿರುದ್ಧ ಅಪಾಯಕಾರಿ ಸೈಬರ್ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಟ್ರಂಪ್, ಉತ್ತರ ಕೊರಿಯದ ಜೊತೆ ಪರಮಾಣು ನಿಶಸ್ತ್ರೀಕರಣ ಮಾತುಕತೆ ನಡೆಸಲು ಪ್ರಯತ್ನಿಸುತ್ತಿರುವ ಬೆನ್ನಿಗೆ ವಾಶಿಂಗ್ಟನ್‌ನಿಂದ ಈ ಸುದ್ದಿ ಬಹಿರಂಗವಾಗಿದೆ. ಮೇ 30ರಂದು ಜೋನಪ್ ಮತ್ತು ಬ್ರಂಬುಲ್ ಎಂಬ ಹೆಸರಿನ ಮಾಲ್ವೇರ್‌ಗಳ ಬಗ್ಗೆ ಅಮೆರಿಕನ್ ಸಂಸ್ಥೆಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಉತ್ತರ ಕೊರಿಯದ ನಾಯಕನನ್ನು ಹತ್ಯೆ ಮಾಡುವ ಕತೆಯನ್ನು ಹೊಂದಿದ್ದ 2014ರ ಸಿನೆಮಾವನ್ನು ವಿರೋಧಿಸಿ ಸೋನಿ ಪಿಕ್ಚರ್ಸ್ ಎಂಟರ್‌ಟೈನ್ಮೆಂಟ್‌ನ ಜಾಲತಾಣವನ್ನು ಹ್ಯಾಕ್ ಮಾಡಿದ್ದರ ಹಿಂದೆ ಕಿಮ್ ಜೊಂಗ ಉನ್ ಅವರ ಸಲಹೆಗಾರ ಕಿಮ್ ಯೊಂಗ್ ಚೊಲ್ ಅವರ ಕೈವಾಡವಿದೆ ಎಂದು ಅನುಮಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News