ಹನೂರು: ಕರುವಿನ ಮೇಲೆ ಚಿರತೆ ದಾಳಿ; ಸ್ಥಳೀಯರಲ್ಲಿ ಆತಂಕ

Update: 2018-05-31 11:41 GMT

ಹನೂರು,ಮೇ.31: ಜಮೀನಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಹನೂರು ಸಮೀಪದ ಜಿ.ಕೆ ಹೂಸರು ಗ್ರಾಮದಲ್ಲಿ ನೆಡದಿದೆ.

ಜಿ.ಕೆ ಹೂಸರು ಗ್ರಾಮದ ಸಿದ್ದಪ್ಪ ಎಂಬವರಿಗೆ ಸೇರಿದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದ್ದು, ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ತಡರಾತ್ರಿ ಚಿರತೆ ದಾಳಿ ನಡೆಸಿದೆ. ನಂತರ ಜೋಳದ ಜಮೀನಿಗೆ ಎಳೆದು ಕೊಂಡು ಹೋಗಿದೆ. 

ಘಟನೆಯ ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಿದ್ದಪ್ಪರ ಜಮೀನಿನ ಸುತ್ತ ಮುತ್ತ ಇರುವ ತೋಟಗಳಲ್ಲಿ ಪರಿಶೀಲನೆ ಮಾಡಿ ಪಟಾಕಿ ಸಿಡಿಸಿ ಕಾರ್ಯಚರಣೆ ನಡೆಸಿದ್ದಾರೆ.

ಸ್ಥಳೀಯರಲ್ಲಿ ಆತಂಕ: ಕಳೆದ 15 ದಿನಗಳಿಂದ ಚಿರತೆ ಜಿ.ಕೆ ಹೂಸರು ಗ್ರಾಮದ ಪಕ್ಕದ ಗ್ರಾಮದ ಬೆಳ್ಳತ್ತೂರಿನ ಅಕ್ಕ ಪಕ್ಕದ ಗ್ರಾಮದ ಜಮೀನುಗಳಲ್ಲಿ ಓಡಾಡುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ನಾಯಿ ಮೇಲೆ ದಾಳಿ ನಡೆಸಿದೆ. ರಾತ್ರಿ ಸಮಯದಲ್ಲಿ ತೋಟದ ಜಮೀನಿಗೆ ಕಾವಲಿಗೆ ಹೋಗುವಂತಹ ಸಮಯದಲ್ಲಿ ತುಂಬಾ ಆತಂಕದಿಂದ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಆದ್ದರಿಂದ ಇದರ ಹಾವಳಿಯನ್ನು ತಪ್ಪಿಸಿ ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ. ನಂತರ ಇದಕ್ಕೆ ಪ್ರತಿಕ್ರಯಿಸಿದ ಅರಣ್ಯ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೂಳ್ಳಲಾಗುವುದು ಎಂದು ಭರವಸೆ ನೀಡಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News